ಚಾಮರಾಜನಗರ:ಪರಿಸರ ಮಾಲಿನ್ಯ ಕುರಿತು ಪಾಠ ಮಾಡುವ ಶಿಕ್ಷಕರೇ ಪ್ಲಾಸ್ಟಿಕ್ ಮೊರೆ ಹೋದ ಘಟನೆ ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕ ದಿನಾಚರಣೆಯಲ್ಲಿ ನಡೆಯಿತು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮತ್ತು ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ನಿಷೇಧಿಸಿದ ಪ್ಲಾಸ್ಟಿಕ್ ಕವರ್ಗಳು ಶಿಕ್ಷಕರ ಕೈಯಲ್ಲಿ ರಾರಾಜಿಸಿದವು. ಸನ್ಮಾನಿತರಿಗೆ ಶಾಲು, ಹಾರ ಹಾಕುವ ಜೊತೆ ಜೊತೆಗೆ ಪ್ಲಾಸ್ಟಿಕ್ ಕವರ್ಗಳನ್ನು ನೀಡಿದ್ದು ಎದ್ದು ಕಂಡಿತು.