ಕರ್ನಾಟಕ

karnataka

ETV Bharat / state

ಸಾಧ್ಯವಾದರೆ ಎಸ್​ಎಸ್​ಎಲ್​ಸಿ ಪರೀಕ್ಷಾ ವೇಳಾಪಟ್ಟಿ ಸೋಮವಾರ ಪ್ರಕಟ: ಸುರೇಶ್ ಕುಮಾರ್

ಸರ್ಕಾರಕ್ಕೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಬೇಕೆಂದು ಒಲವಿದೆ. ಯಾವ ರೀತಿ ಪರೀಕ್ಷೆ ನಡೆಸಬಹುದೆಂದು ತಜ್ಞರ ಜೊತೆ ಮುಕ್ತವಾಗಿ ಸೋಮವಾರ ಮಾತನಾಡುತ್ತೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದು, ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗುವುದು ಎಂದು ಸಚಿವ ಸುರೇಶ್​ ಕುಮಾರ್​ ಮಾಹಿತಿ ನೀಡಿದರು.

Suresh Kumar
ಸುರೇಶ್ ಕುಮಾರ್

By

Published : May 15, 2020, 2:38 PM IST

ಚಾಮರಾಜನಗರ:ಎಸ್​ಎಸ್​ಎಲ್​ಸಿ ಪರೀಕ್ಷೆ ಕುರಿತು ಶಿಕ್ಷಣ ತಜ್ಞರೊಂದಿಗೆ ಸೋಮವಾರ ಸಭೆ ನಡೆಯಲಿದ್ದು, ಅಂದೇ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಗುಂಡ್ಲುಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಬೇಕೆಂದು ಒಲವಿದೆ. ಯಾವ ರೀತಿ ಪರೀಕ್ಷೆ ನಡೆಸಬಹುದೆಂದು ತಜ್ಞರ ಜೊತೆ ಮುಕ್ತವಾಗಿ ಸೋಮವಾರ ಮಾತನಾಡುತ್ತೇವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದು, ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಎಸ್​ಎಸ್​ಎಲ್​ಸಿ ತರಗತಿಗಳನ್ನು ದೂರದರ್ಶನದ ಮೂಲಕ ಮಾಡಲಾಗುತ್ತಿದ್ದು, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಗಾಗಿಯೇ ಹೊಸ ಚಾನೆಲ್​​​ವೊಂದನ್ನು ಪ್ರಾರಂಭಿಸುವ ಚಿಂತನೆ ಇದೆ. ಇದು ಕೇವಲ ಮಕ್ಕಳ‌ ಶಿಕ್ಷಣಕ್ಕಾಗಿಯೇ ಬಳಕೆಯಾಗಲಿದೆ ಎಂದು ತಿಳಿಸಿದರು.

ಲಾಕ್​ಡೌನ್​​ನಿಂದ ಶೈಕ್ಷಣಿಕ ವರ್ಷ ಎಷ್ಟು ಕಡಿತವಾಗಲಿದೆ ಎಂಬುದರ ಕುರಿತು ಪರಿಶೀಲಿಸಲಾಗುತ್ತಿದೆ. ಎಷ್ಟು ದಿನ ಕಡಿತವಾಗುತ್ತದೆಯೋ ಅಷ್ಟು ಪಠ್ಯವನ್ನು ಕೈಬಿಡಲು ಚಿಂತನೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಹೊರೆಯಾಗದಂತೆ ಇಲಾಖೆ ನೋಡಿಕೊಳ್ಳುತ್ತದೆ ಎಂದರು.

ಇದೇ ವೇಳೆ ಉದ್ಯೋಗ ಖಾತ್ರಿ ಯೋಜನೆ ಕುರಿತು ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ನರೇಗಾ ಕೆಲಸ ಭರದಿಂದ ಸಾಗುತ್ತಿದೆ. ಲಾಕ್​ ​ಡೌನ್​ನಿಂದ ಕೂಲಿ ಸಿಗದೆ ಬೇಸತ್ತಿದ್ದ ಜನರಿಗೆ ಇದರಿಂದ ಅನುಕೂಲವಾಗಿದೆ. ಈವರೆಗೆ 2.42 ಲಕ್ಷ ಮಾನವ ದಿನಗಳು ಜಿಲ್ಲೆಯಲ್ಲಿ ಸೃಷ್ಟಿಯಾಗಿದ್ದು, ಈಗಾಗಲೇ 5 ಕೋಟಿ ರೂ.‌ಹಣ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details