ಚಾಮರಾಜನಗರ: ಮೈತ್ರಿ ಸರ್ಕಾರ ರಚನೆ-ಪತನ, ಡಿಕೆಶಿ ಬಂಧನ, ವಿಪಕ್ಷ ನಾಯಕನಾಗಲು ಹೊರಟಿರುವುದೆಲ್ಲವೂ ಸಿದ್ದರಾಮಯ್ಯನವರ ಆ್ಯಕ್ಷನ್ ಪ್ಲಾನ್ ಎಂದು ಸಚಿವ ಶ್ರೀರಾಮುಲು ಬಾಂಬ್ ಸಿಡಿಸಿದ್ದಾರೆ.
ಮೈತ್ರಿ ಕೆಡವಿದ್ದು, ಡಿಕೆಶಿ ಜೈಲಿಗೆ ಕಳುಹಿ'ಸಿದ್ದು'ಆ್ಯಕ್ಷನ್ ಪ್ಲಾನ್.. ಶ್ರೀರಾಮುಲು ಆರೋಪ - siddaramaiah news
ಜಿಲ್ಲಾ ಪ್ರವಾಸ ಕೈಗೊಂಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಮಾಧ್ಯಮಗಳ ಜೊತೆ ಮಾತನಾಡಿ, ಹೆಚ್‌ಡಿಡಿ ಮತ್ತು ಸಿದ್ದರಾಮಯ್ಯ ಯಾವತ್ತೂ ಒಂದಾಗಿಲ್ಲ. ಈ ಕಾರಣಕ್ಕಾಗೇ ಅವರು ಈಗ ಕಿತ್ತಾಡುತ್ತಿದ್ದಾರೆ. ಅವರು ಹೇಗೋ ಸಮ್ಮಿಶ್ರ ಸರ್ಕಾರ ನಡೆಸಿಕೊಂಡು ಹೋಗಬೇಕಿತ್ತು. ಅದಕ್ಕಾಗಿ ಸರ್ಕಾರ ಇರುವ ವರೆಗೂ ಚೆನ್ನಾಗಿದ್ದರು. ಇದೆಲ್ಲಾ ಸಿದ್ದರಾಮಯ್ಯ ಅವರ ಆ್ಯಕ್ಷನ್ ಪ್ಲಾನ್ ಎಂದರು.
ರಾಮುಲು ಟಾಂಗ್
ಜಿಲ್ಲಾ ಪ್ರವಾಸ ಕೈಗೊಂಡಿರುವ ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೆಚ್‌ಡಿಡಿ ಮತ್ತು ಸಿದ್ದರಾಮಯ್ಯ ಯಾವತ್ತೂ ಒಂದಾಗಿಲ್ಲ. ಈ ಕಾರಣಕ್ಕಾಗೇ ಅವರು ಈಗ ಕಿತ್ತಾಡುತ್ತಿದ್ದಾರೆ ಎಂದು ಹರಿಹಾಯ್ದರು.ಆರೋಗ್ಯ ಸಚಿವ ಸ್ಥಾನ ತೃಪ್ತಿ ನೀಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರಿಗೂ ಯಾವ ಸ್ಥಾನ ಕೊಟ್ಡರೂ ತೃಪ್ತಿ ನೀಡಲ್ಲ. ಕಾಯಕವೇ ಕೈಲಾಸ ಎಂದು ನಂಬಿದ್ದು, ಅದರಂತೆ ಕಾರ್ಯ ನಿರ್ವಹಿಸುತ್ತೇನೆ ಎಂದರು.