ಕೊಳ್ಳೇಗಾಲ (ಚಾಮರಾಜನಗರ): ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ಹೆತ್ತ ತಾಯಿಗೆ ಒದ್ದು ಕ್ರೌರ್ಯ ಮರೆದಿರುವ ಘಟನೆ ಕೊಳ್ಳೇಗಾಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಳ್ಳೇಗಾಲ ತಾಲೂಕಿನ ಉಗನಿ ಗ್ರಾಮದ ರಾಜಮ್ಮ ಹಲ್ಲೆಗೊಳಗಾದ ಸಂತ್ರಸ್ತೆಯಾಗಿದ್ದು, ಆತನ ಮಗ ದೊರೆಸ್ವಾಮಿ ಎಂಬುವವ ಹಲ್ಲೆ ನಡೆಸಿ, ಕ್ರೌರ್ಯ ಮೆರೆದಿದ್ದಾನೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಯುತ್ತಿರುವ ವೇಳೆ ದೊರೆಸ್ವಾಮಿ ತನ್ನ ತಾಯಿಗೆ ಒದ್ದಿದ್ದಾನೆ. ಈ ವೇಳೆ, ಕುಸಿದು ಬಿದ್ದ ರಾಜಮ್ಮಳನ್ನು ಕೊಳ್ಳೇಗಾಲ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗನ ಕ್ರೌರ್ಯದ ವಿಡಿಯೋ ಸೆರೆಯಾಗಿದ್ದು, ತಾಯಿ ರಾಜಮ್ಮ ತನ್ನ ಮಗ ದೊರೆಸ್ವಾಮಿ, ಆತನ ಪತ್ನಿ ಹಾಗೂ ಸ್ನೇಹಿತರ ಮೇಲೆ ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.