ಚಾಮರಾಜನಗರ: ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮದ್ಯದಂಗಡಿ ಹೊತ್ತಿ ಉರಿದಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ: ಹೊತ್ತಿ ಉರಿದ ಮದ್ಯದಗಂಡಿ... ಲಕ್ಷಾಂತರ ಮೌಲ್ಯದ ಮಾಲು ಭಸ್ಮ - ಲಕ್ಷಾಂತರ ಮೌಲ್ಯದ ಮದ್ಯ ಭಸ್ಮ ಸುದ್ದಿ
ಎಂಎಸ್ಐಎಲ್ ಶಾಪ್ನಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಲಕ್ಷಾಂತರ ರೂ. ಮೌಲ್ಯದ ಮದ್ಯ ಸುಟ್ಟು ಭಸ್ಮವಾಗಿದೆ.
ಧಗಧಗಿಸಿದ ಮದ್ಯದಗಂಡಿ, ಲಕ್ಷಾಂತರ ಮೌಲ್ಯದ ಮಾಲು ಭಸ್ಮ
ರಾಜಕಾರಣಿ ಶಿವಬಸಪ್ಪ ಅವರಿಗೆ ಸೇರಿದ ಎಂಎಸ್ಐಎಲ್ ಶಾಪ್ನಲ್ಲಿ ದಿಢೀರ್ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲೇ ಲಕ್ಷಾಂತರ ರೂ. ಮೌಲ್ಯದ ಮದ್ಯದ ಸ್ಯಾಷೆಗಳು, ಬಾಟಲಿಗಳು ಭಸ್ಮವಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ.
ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತೆರಕಣಾಂಬಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.