ಚಾಮರಾಜನಗರ: ಪೊಲೀಸರ ಕಣ್ತಪ್ಪಿಸಿ ಅನಗತ್ಯವಾಗಿ ಬಡಾವಣೆಯ ಅಡ್ಡರಸ್ತೆಗಳ ಮೂಲಕ ಸಂಚರಿಸುತ್ತಿದ್ದನ್ನು ಗಮನಿಸಿದ ನಿವಾಸಿಗಳು ಬಡಾವಣೆಯ ದಾರಿಯನ್ನೇ ಬಂದ್ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಡಾ.ಬಾಬು ಜಗಜೀವನ್‌ರಾಂ ಬಡಾವಣೆಯ ನಿವಾಸಿಗಳು ತಮ್ಮ ಬಡಾವಣೆಗಳಿಗೆ ಹೊರಗಿನಿಂದ ಯಾವ ವಾಹನಗಳು ಬಾರದಂತೆ ತಡೆಯುವ ನಿಟ್ಟಿನಲ್ಲಿ ಪ್ರಮುಖ ರಸ್ತೆಗಳ ಮುಖ್ಯ ದ್ವಾರದಲ್ಲಿ ಮರದ ದಿಮ್ಮಿಗಳನ್ನಿಟ್ಟು ರಸ್ತೆ ಬಂದ್ ಮಾಡಿದ್ದಾರೆ.
ಬಡಾವಣೆ ರಸ್ತೆಯನ್ನೇ ಬಂದ್ ಮಾಡಿದ ಜನ ಕೊರೊನಾ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳು ಹಾಗೂ ಜನರನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಸಿಬ್ಬಂದಿ ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಡಿವೈಎಸ್ಪಿ ಕಚೇರಿ ಬಳಿ ಬ್ಯಾರಿಕೇಡ್ ಅಳವಡಿಸಿ ರಸ್ತೆ ಸಂಚಾರ ಬಂದ್ ಮಾಡಿದ್ದರು. ಇದರಿಂದ ಆಸ್ಪತ್ರೆಗಳು, ಕಚೇರಿಗಳು, ಬ್ಯಾಂಕ್‌ಗಳಿಗೆ ತೆರಳುತ್ತಿದ್ದ ಜನರು ಜೊತೆಗೆ ಅನಗತ್ಯವಾಗಿ ಓಡಾಡುತ್ತಿದ್ದ ಹಾಗೂ ವಾಹನ ಸವಾರರು ಅನಿವಾರ್ಯವಾಗಿ ಕೋರ್ಟ್ ರಸ್ತೆ ಮೂಲಕ ಸಾಗಿ ಬಾಬು ಜಗಜೀವನ್‌ರಾಂ ಬಡಾವಣೆಯ ಮೂಲಕ ಬಸವೇಶ್ವರ ಚಿತ್ರಮಂದಿರದ ಬಳಿ ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ತೆರಳುತ್ತಿದ್ದರು.
ಇದರಿಂದ ಬಡಾವಣೆಯಲ್ಲಿ ಕಾರುಗಳು, ಬೈಕ್‌ಗಳು ಹಾಗೂ ಜನರ ಓಡಾಟ ಹೆಚ್ಚಾಯಿತು. ಇದರಿಂದ ಭಯಗೊಂಡು ಬಡಾವಣೆಯ ನಿವಾಸಿಗಳು ಬಡಾವಣೆಯ ಒಳಗೆ ಯಾವ ವಾಹನಗಳು ಬಾರದಂತೆ ತಡೆಯುವ ಸಲುವಾಗಿ ಬಸವೇಶ್ವರ ಚಿತ್ರಮಂದಿರದ ಬಳಿ ಮುಖ್ಯ ದ್ವಾರಗಳಲ್ಲಿ ಮರದ ದಿಮ್ಮಿಗಳು ಹಾಗೂ ಫ್ಲೆಕ್ಸ್ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ಬಂದ್ ಮಾಡಿದ್ದಾರೆ.