ಚಾಮರಾಜನಗರ (ಕೊಳ್ಳೇಗಾಲ): ಕೊರೊನಾ ಎಫೆಕ್ಟ್ನಿಂದ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದರಿಂದ ಶಿವನ ಸಮುದ್ರದ ಸಮೂಹ ದೇವಾಲಯಗಳ ಹುಂಡಿ ಎಣಿಕೆಯಲ್ಲಿ ಭಾರಿ ಇಳಿಕೆ ಕಂಡಿದೆ.
ತಾಲೂಕಿನ ಶಿವನ ಸಮುದ್ರ ಸಮೀಪದ ಮಧ್ಯರಂಗನಾಥ ದೇವಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ ಮಾಡಲಾಯಿತು. ಈ ವೇಳೆ 6,67,710 ಲಕ್ಷ ರೂ ಸಂಗ್ರಹವಾಗಿದ್ದು, ಈ ಹಿಂದೆ 2019ರ ಡಿಸೆಂಬರ್ನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದಾಗ ಬರೋಬ್ಬರಿ 10 ಲಕ್ಷ ರೂ. ಸಂಗ್ರಹವಾಗಿತ್ತು.
ಮೂರು ತಿಂಗಳಿಗೊಮ್ಮೆ ನಡೆಯಬೇಕಾದ ಹುಂಡಿ ಎಣಿಕೆ ಕಾರ್ಯ ಇದೀಗ ಆರು ತಿಂಗಳಿನಲ್ಲಿ ನಡೆದಿದೆ. ಕೊರೊನಾ ಪರಿಸ್ಥಿತಿಯಲ್ಲಿ ದೇಗುಲಗಳ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದಾಗಿ ಶ್ರೀ ಮಧ್ಯ ರಂಗನಾಥ ದೇವಾಲಯ, ಸೊಮೇಶ್ವರ ದೇವಾಲಯ, ಆದಿಶಕ್ತಿಮಾರಮ್ಮನ ಸಮೂಹ ದೇವಾಲಯಗಳಲ್ಲಿ ಒಟ್ಟು 6,69, 710 ಲಕ್ಷ ರೂ.ಗಳು ಮಾತ್ರ ಸಂಗ್ರಹವಾಗಿದ್ದು, ಅರ್ಧ ಗ್ರಾಂ ಚಿನ್ನ, 10 ಗ್ರಾಂ ಬೆಳ್ಳಿಯನ್ನು ಭಕ್ತರು ದೇವರಿಗೆ ಅರ್ಪಿಸಿದ್ದಾರೆ.
ಕಳೆದ ಬಾರಿಯ ಸಂಗ್ರಹಕ್ಕೆ ಹೋಲಿಸಿಕೊಂಡರೆ ಶೇ. 40ರಷ್ಟು ಹಣದ ಪ್ರಮಾಣ ಕಡಿಮೆಯಾಗಿದೆ. ಚಿನ್ನ, ಬೆಳ್ಳಿ ಪದಾರ್ಥಗಳ ಸಂಗ್ರಹಣೆಯಲ್ಲೂ ಇಳಿಕೆಯಾಗಿದೆ.