ಕೊಳ್ಳೇಗಾಲ: ಪಟ್ಟಣದ ವ್ಯಾಪಾರ ಮಳಿಗೆಗಳಿಗೆ ನಗರಸಭೆ ಹೆಚ್ಚುವರಿ ತೆರಿಗೆ ವಿಧಿಸಿದ್ದನ್ನು ವಿರೋಧಿಸಿ ವರ್ತಕರು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಕೊಳ್ಳೇಗಾಲ: ತೆರಿಗೆ ಹೆಚ್ಚಳ ವಿರೋಧಿಸಿ ವರ್ತಕರಿಂದ ಪ್ರತಿಭಟನೆ
ವ್ಯಾಪಾರ ಮಳಿಗೆಗಳಿಗೆ ನಗರಸಭೆ ಹೆಚ್ಚುವರಿ ತೆರಿಗೆ ವಿಧಿಸಿದ್ದನ್ನು ವಿರೋಧಿಸಿ ಕೊಳ್ಳೇಗಾಲದಲ್ಲಿ ವರ್ತಕರು ಪ್ರತಿಭಟನೆ ನಡೆಸಿದರು.
ನಗರಸಭೆ ಕಚೇರಿಯಲ್ಲಿ ಜಮಾಯಿಸಿದ ವರ್ತಕರು, ಲಾಕ್ಡೌನ್ನಿಂದಾಗಿ ಈಗಾಗಲೇ ಸಂಕಷ್ಟದಲ್ಲಿದ್ದೇವೆ. ಈ ಸಮಯದಲ್ಲಿ ಹೆಚ್ಚುವರಿ ತೆರಿಗೆ ವಿಧಿಸಿರುವುದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತೆರಿಗೆ ಹೊರೆ ಕಡಿಮೆ ಮಾಡುವಂತೆ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ವರ್ತಕರ ಒಕ್ಕೂಟದ ಅಧ್ಯಕ್ಷ ಎ.ಪಿ.ಎಸ್.ರಾಜು, ಒಂದೂವರೆ ತಿಂಗಳ ಲಾಕ್ಡೌನ್ನಿಂದ ಮುಕ್ತಿ ಪಡೆದು ಈಗಷ್ಟೇ ಅಂಗಡಿ ಮಳಿಗೆ ತೆರೆದು ವ್ಯಾಪಾರ ಪ್ರಾರಂಭಿಸಿದ್ದೇವೆ. ಇಂತಹ ಸಮಯದಲ್ಲಿ ನಗರಸಭೆ ತೆರಿಗೆ ಹೆಚ್ಚಿಸಿರುವುದು ನಮಗೆ ದೊಡ್ಡ ಹೊರೆಯಾಗಿದೆ. ಆದ್ದರಿಂದ ಆಗಸ್ಟ್ವರೆಗೆ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದರು.