ಚಾಮರಾಜನಗರ: ಭೂ ಸುಧಾರಣೆ ಕಾಯ್ದೆ ವಿರುದ್ಧ ನಗರದಲ್ಲಿಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಛೀ... ಥೂ..ಚಳುವಳಿ ನಡೆಸಲಾಯಿತು.
ಭೂ ಸುಧಾರಣೆ ಕಾಯ್ದೆ ವಿರುದ್ಧ ಚಾಮರಾಜನಗರದಲ್ಲಿ ಛೀ..ಥೂ ಚಳುವಳಿ - ರಾಜ್ಯ ರೈತ ಸಂಘ
ರಾಜಕೀಯ ಪಕ್ಷಗಳು ರೈತರ ಹಿತಾಸಕ್ತಿ ಕಾಪಾಡದೆ ಮರಣ ಶಾಸನದ ರೀತಿ ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ರೈತ ಸಂಘದ ಕಾರ್ಯಕರ್ತರು ಮೆರವಣಿಗೆ ಆರಂಭಿಸಿ ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದರು. ಈ ವೇಳೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ಭಾವಚಿತ್ರಗಳಿಗೆ ಸಗಣಿ ಎರಚಿ ಆಕ್ರೋಶ ಹೊರಹಾಕಿದರು. ರಾಜಕೀಯ ನಾಯಕರ ಭಾವಚಿತ್ರಗಳಿಗೆ ಛೀ.. ಥೂ ಎಂದು ಉಗಿದು ಕಾಯ್ದೆ ಜಾರಿ ವಿರುದ್ಧ ಕಿಡಿಕಾರಿದರು.
ರಾಜಕೀಯ ಪಕ್ಷಗಳು ರೈತರ ಹಿತಾಸಕ್ತಿ ಕಾಪಾಡದೇ ಮರಣ ಶಾಸನದ ರೀತಿ ಭೂ ಸುಧಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿದ್ದಾರೆ. ಜೊತೆಗೆ, ವಿದ್ಯುತ್ ಕಾಯ್ದೆಯನ್ನು ಬದಲಿಸಲು ಹೊರಟಿದ್ದಾರೆ. ಇದು ನಿಲ್ಲದಿದ್ದಲ್ಲಿ ರೈತರು ದಂಗೆ ಎದ್ದು ಉಗ್ರ ಪ್ರತಿಭಟನೆ ನಡೆಸುತ್ತಾರೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಎಚ್ಚರಿಸಿದರು.