ಚಾಮರಾಜನಗರ: ಮಹಾಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸಕಲ ಸಿದ್ಧತೆ ಆರಂಭವಾಗಿದ್ದು, ದೀಪಾಲಂಕಾರದಿಂದ ದೇಗುಲ ಜಗಮಗಿಸುತ್ತಿದೆ.
ರಥವನ್ನು ಇಂದು ದೇವಳದ ಆನೆ ಉಮಾಳಿಂದ ಎಳೆಸಲಾಗಿದ್ದು, ನಾಳೆ ಆಗಮಿಕರಾದ ಕರವೀರಸ್ವಾಮಿ ಅವರು ರಥಕ್ಕೆ ಸಂಪ್ರೋಕ್ಷಣೆ ಮಾಡಿ ರಥಕ್ಕೆ ಅಲಂಕಾರ ಮಾಡುವ ಕಾರ್ಯ ಗುರುವಾರದಿಂದ ಆರಂಭವಾಗಲಿದೆ. ಶಿವರಾತ್ರಿ ಜಾತ್ರೆ ಪ್ರಯುಕ್ತ ಉತ್ಸವ ಮೂರ್ತಿಯನ್ನು ಸಾಲೂರು ಮಠಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ನಾಳೆ ಪೂಜೆ ಸಲ್ಲಿಸಿ ದೇವಾಲಯಕ್ಕೆ ತರಲಿದ್ದಾರೆ.
ಶಿವರಾತ್ರಿ ದಿನದಂದು ದೇವಾಲಯ ಪ್ರಾಂಗಣಕ್ಕೆ ಹೂವಿನ ಅಲಂಕಾರ ಮಾಡಲಾಗಿದ್ದು, ನಾಳೆ ಬೆಳಗ್ಗೆ ನಾಲ್ಕರ ಜಾವದಲ್ಲಿ ಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ. ಸಹಸ್ರ ಬಿಲ್ವಾರ್ಚನೆ, ರುದ್ರಾಭಿಷೇಕ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದರು.