ಕರ್ನಾಟಕ

karnataka

ETV Bharat / state

ವರ ಮಹಾಲಕ್ಷ್ಮಿ ಹಬ್ಬ; ಹೂ, ಹಣ್ಣಿನ ದರ ಏರಿಕೆ.. ವ್ಯಾಪಾರಿಗಳಲ್ಲಿ ಸಂತಸ

ನಾಳೆ ನಡೆಯುವ ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆಯಲ್ಲಿ ಜನ ಬ್ಯುಸಿಯಾಗಿದ್ದಾರೆ. ವಿವಿಧ ವಸ್ತುಗಳನ್ನು ಕೊಳ್ಳಲು ಮಾರುಕಟ್ಟೆಗೆ ಧಾವಿಸಿರುವ ಜನ ಸಾಮಾಜಿಕ ಅಂತರ ಮರೆತು ಖರೀದಿಗೆ ಮುಗಿಬಿದ್ದಿರುವ ದೃಶ್ಯಗಳು ಕಂಡು ಬರುತ್ತಿವೆ.

VaramahaLakshmi Pooja
ಕೊರೊನಾ ನಡುವೆ ವರ ಮಹಾಲಕ್ಷ್ಮಿ ಹಬ್ಬ, ಹೂ,ಹಣ್ಣಿನ ದರ ಏರಿಕೆ, ಖರೀದಿಯಲ್ಲಿ ಜನ ಬ್ಸುಸಿ, ಸಾಮಾಜಿಕ ಅಂತರಕ್ಕೆ ಬಿತ್ತು ಬ್ರೇಕ್‌

By

Published : Jul 30, 2020, 4:37 PM IST

ಕೊಳ್ಳೇಗಾಲ:ಕೊಳ್ಳೇಗಾಲ‌ ಪಟ್ಟಣದ ಮುಖ್ಯ ರಸ್ತೆಗಳಾದ ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ, ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ರಸ್ತೆ, ಚಿನ್ನದ ಅಂಗಡಿ ಬೀದಿ, ಬಳೆ ಪೇಟೆಯಲ್ಲಿ ಜನ ಮತ್ತು ವಾಹನ ದಟ್ಟಣೆ ಅಧಿಕವಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

ಕೊರೊನಾ ನಡುವೆ ವರ ಮಹಾಲಕ್ಷ್ಮಿ ಹಬ್ಬ, ಹೂ,ಹಣ್ಣಿನ ದರ ಏರಿಕೆ, ಖರೀದಿಯಲ್ಲಿ ಜನ ಬ್ಸುಸಿ, ಸಾಮಾಜಿಕ ಅಂತರಕ್ಕೆ ಬಿತ್ತು ಬ್ರೇಕ್‌

ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿಯ ಮಧ್ಯೆ ಸಾಮಾಜಿಕ ಅಂತರ ಮರೆತೇ ಹೋಗಿತ್ತು. ಕೆಲವರು ಮಾಸ್ಕ್ ಧರಿಸದೆ ವ್ಯಾಪಾರಕ್ಕೆ ಬಂದಿದ್ದರು. ಕೊಳ್ಳೇಗಾಲದಲ್ಲಿ ಅಧಿಕವಾಗಿ ಕೊರೊನಾ ಕೇಸ್ ದೃಢಪಟ್ಟಿದ್ದರೂ, ಜನರು‌ ಡೋಂಟ್​ ಕೇರ್ ಎಂದು ಗುಂಪು ಗುಂಪಾಗಿ ರಸ್ತೆಗಳಿದಿದ್ದರು. ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಮಾಡಿ ಜನರಿಗೆ ಎಷ್ಟೇ ತಿಳುವಳಿಕೆ ಹೇಳಿದರೂ ಜನ ಮಾತ್ರ ತಮಗೆ ತೋಚಿದಂತೆ ವರ್ತಿಸುತ್ತಿರುವುದು ವಿಪರ್ಯಾಸವೇ ಸರಿ.

ಹಬ್ಬದ ವಿಚಾರಕ್ಕೆ ಬಂದರೆ ಹೂ, ಹಣ್ಣು, ಬಾಳೆ ಕಂದು, ಮಾವಿನ ಎಲೆ, ಬಟ್ಟೆ, ಆಭರಣಗಳ ಹಾಗೂ ಪೂಜಾ ಸಾಮಗ್ರಿಗಳ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಪ್ರಮುಖವಾಗಿ ಬೇಕಾದ ಹಬ್ಬದ ಸಾಮಗ್ರಿಗಳು ದುಬಾರಿಯಾಗಿವೆ. ಇದರಿಂದಾಗಿ ಲಾಕ್​ಡೌನ್​ನಲ್ಲಿ ಆರ್ಥಿಕ ಸಂಕಷ್ಟ ಅನುಭವಿಸುತ್ತಿರುವ ಜನರ ಕಿಸೆಗೆ ಕತ್ತರಿ ಬಿದ್ದಂತಾಗಿದ್ದು ಮಾತ್ರ ನಿಜ.

ಹಣ್ಣುಗಳ‌ ಬೆಲೆ‌ ಏರಿಕೆಯಾಗಿದ್ದು,‌ ಆ್ಯಪಲ್ ಕೆಜಿಗೆ 200, ದಾಳಿಂಬೆ 100, ದ್ರಾಕ್ಷಿ 120, ಕಪ್ಪು ದ್ರಾಕ್ಷಿ 120, ಮಾವು 70, ಬಾಳೆ ಹಣ್ಣು 70, ಕಿತ್ತಳೆ 120, ಬೇರಿಕಾಯಿ 100, ಪೈನಾಪಲ್ ಸೈಜ್ ಒಂದಕ್ಕೆ 50 ಇದೆ. ಒಟ್ಟಾರೆ ಲಾಕ್ ಡೌನ್ ನಡುವೆ ಬೇಸತ್ತಿದ್ದ ವ್ಯಾಪಾರಿಗಳ‌ ಮೊಗದಲ್ಲಿ ಈ ವರಮಹಾಲಕ್ಷ್ಮಿ ಹಬ್ಬ ಸ್ವಲ್ಪ ಮಟ್ಟಿಗೆ ಸಂತಸ ತಂದಿದೆ. ಇನ್ನು ಹೂಗಳ ದರ ಗಗನ‌ ತಲುಪಿದ್ದು, ಮಾರು ಸೇವಂತಿ 200 ರೂ, ಮಲ್ಲಿಗೆ 150, ಕನಕಾಂಬರ 150, ಚೆಂಡು‌ ಹೂ 50 ರೂ ಇದೆ. ತಾವರೆ ಹೂ ಒಂದಕ್ಕೆ 40 ರೂ ನಡೆಯುತ್ತಿತ್ತು.‌ ಕೊರೊನಾದಿಂದಾಗಿ ವ್ಯಾಪಾರ ನೆಲಕಚ್ಚಿತ್ತು. ಈ ದಿನ ಪರವಾಗಿಲ್ಲ ಎಂದು ಹೇಳುತ್ತಿದ್ದಾರೆ ವ್ಯಾಪಾರಸ್ಥರು.

ABOUT THE AUTHOR

...view details