ಕೊಳ್ಳೇಗಾಲ: ಪರವಾನಗಿ ಇಲ್ಲದೆ ಸ್ಫೋಟಕ ಸಾಮಗ್ರಿ ಸಾಗಿಸುತ್ತಿದ್ದ ಶ್ರೀನಿವಾಸ್, ಅಭಿಷೇಕ್ ಎಂಬಿಬ್ಬರನ್ನು ಸತ್ತೇಗಾಲ ಚೆಕ್ಪೋಸ್ಟ್ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸ್ಫೋಟಕ ಸಾಮಗ್ರಿ ಅಕ್ರಮ ಸಾಗಣೆ: ಕೊಳ್ಳೇಗಾಲದಲ್ಲಿ ಇಬ್ಬರ ಬಂಧನ - ಚಾಮರಾಜನಗರ ಅಪರಾಧ ಸುದ್ದಿ
ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಮಂಗಳವಾರ (ಮೇ 12) ಮಧ್ಯರಾತ್ರಿ ಮಳವಳ್ಳಿ ತಾಲೂಕಿನ ಕಡೆಯಿಂದ ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ ಪೊಲೀಸರು ಪ್ರಶ್ನಿಸಿದ್ದು ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಕಾರು ಪರಿಶೀಲಿಸಿದಾಗ 22 ಜಿಲೆಟಿನ್ ಸ್ಟಿಕ್ಸ್ ಹಾಗೂ 22 ನಾನ್ ಎಲೆಕ್ಟ್ರಿಕಲ್ ಡಿಟೋನೇಟರ್ಗಳಿದ್ದವು. ಇವರ ಬಳಿ ಅಂತರ್ ಜಿಲ್ಲೆಗೆ ಪ್ರವೇಶಿಸುವ ಪಾಸ್ ಕೂಡ ಇರಲಿಲ್ಲ.
ಬೂದು ಗಟ್ಟೆಯಲ್ಲಿರುವ ತಮ್ಮ ಜಮೀನಿನಲ್ಲಿ ಕಲ್ಲು ಬಂಡೆಗಳನ್ನು ಸ್ಫೋಟಿಸಲು ಈ ಸಾಮಗ್ರಿ ಕೊಂಡೊಯ್ಯುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ. ಇದಕ್ಕೆ ಪರವಾನಗಿ ಹೊಂದಿರಲಿಲ್ಲ. ಹೀಗಾಗಿ ಕಾರು ವಶಪಡಿಸಿಕೊಂಡ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.