ನಾಲ್ಕು ವರ್ಷವಾದ್ರೂ ಗಡಿಜಿಲ್ಲೆ ಪ್ರವಾಸೋದ್ಯಮ ಇಲಾಖೆಗೆ ಖಾಯಂ ಅಧಿಕಾರಿಯಿಲ್ಲ.. - officer for chamrajnagar tourism department
ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬರದೇ ಹಾಗೆಯೇ ಉಳಿದಿವೆ. 2012ರ ಆಗಸ್ಟ್‌ನರೆಗೆ ಫಣೀಶ್, 2012-2016 ಜನಾರ್ದನ್ ಎಂಬುವರು ಉಪ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಬಳಿಕ 2-3 ವರ್ಷ ಜನಾರ್ದನ್ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಿ ತಿಂಗಳಿಗೊಮ್ಮೆ ಇಲ್ಲ ಎರಡು ಬಾರಿ ಬರುತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು..
ಪ್ರವಾಸೋದ್ಯಮ ಇಲಾಖೆಗೆ ಖಾಯಂ ಅಧಿಕಾರಿಯಿಲ್ಲ
ಚಾಮರಾಜನಗರ :ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿರುವ ಚಾಮರಾಜನಗರಕ್ಕೆ ಖಾಯಂ ಪ್ರವಾಸೋದ್ಯಮ ಅಧಿಕಾರಿ ಇಲ್ಲದೆ ನಾಲ್ಕು ವರ್ಷ ಕಳೆದಿವೆ.
ಈಗಾಗಾಲೇ ಖಾಯಂ ಅಧಿಕಾರಿಯಿಲ್ಲದೇ ನಾಲ್ಕು ವರ್ಷ ಕಳೆದಿದ್ದು ಕೊರೊನಾ ಆರ್ಭಟದ ಬಳಿಕ ಪ್ರವಾಸಿಗರನ್ನು ಆಕರ್ಷಿಸಲು ಖಾಯಂ ಅಧಿಕಾರಿಯನ್ನು ನೇಮಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕಿದೆ.