ಚಾಮರಾಜನಗರ: ಎನ್ಡಿಎ ಎನ್ನುವುದು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟವಲ್ಲ, ಅದೊಂದು ರಾಷ್ಟ್ರೀಯ ವಿಧ್ವಂಸಕರ ಕೂಟ ಎಂದು ಚಿಂತಕ ಪ್ರೊ.ಮಹೇಶ ಚಂದ್ರ ಗುರು ಟೀಕಿಸಿದರು.
ಎನ್ಡಿಎ ರಾಷ್ಟ್ರೀಯ ವಿಧ್ವಂಸಕರ ಕೂಟ, ಅದನ್ನು ದೇಶ ಬಿಟ್ಟು ಓಡ್ಸಿ : ಪ್ರೊ.ಮಹೇಶ ಚಂದ್ರ ಗುರು
ಒಂದು ವೇಳೆ ಈ ಬಾರಿ ಎನ್ಡಿಎ ಅಧಿಕಾರಕ್ಕೆ ಬಂದರೆ ಅಧ್ಯಕ್ಷೀಯ ಪದ್ಧತಿ, ಸರ್ವಾಧಿಕಾರ ದೇಶದಲ್ಲಿ ನೆಲೆಗೊಳ್ಳಲಿದೆ ಎಂದು ಚಿಂತಕ ಪ್ರೊ.ಮಹೇಶ ಚಂದ್ರ ಗುರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 5 ವರ್ಷಗಳಲ್ಲಿ ಯಾವ ಅಭಿವೃದ್ಧಿಯೂ ಮಾಡದೆ ಮೂಲಭೂತವಾದ ಮೆರೆದಿದ್ದಾರೆ. ಒಂದು ವೇಳೆ ಈ ಬಾರಿ ಎನ್ಡಿಎ ಅಧಿಕಾರಕ್ಕೆ ಬಂದರೆ ಅಧ್ಯಕ್ಷೀಯ ಪದ್ಧತಿ, ಸರ್ವಾಧಿಕಾರ ದೇಶದಲ್ಲಿ ನೆಲೆಗೊಳ್ಳಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಬ್ರಿಟೀಷರನ್ನು ಭಾರತ ಬಿಟ್ಟು ಓಡಿಸಿದಂತೆ ಬಿಜೆಪಿಯರನ್ನು ದೇಶ ಬಿಟ್ಟು ಓಡಿಸಬೇಕು. ಕ್ವಿಟ್ ಎನ್ಡಿಎ- ಸೇವ್ ಇಂಡಿಯಾ ಎಂಬುದು ನನ್ನ ಭಾವನೆಯಾಗಿದೆ ಎಂದರು.
ಬಾಬಾ ಸಾಹೇಬರು ಪ್ರಾರಂಭಿಸಿದ ಚಳವಳಿಯನ್ನು ಕಾನ್ಷಿರಾಂ ಮುನ್ನಡೆಸಿದ್ದರು. ಈಗ ಅದನ್ನು ಬಿಎಸ್ಪಿ ಹಾದಿ ತಪ್ಪಿಸುತ್ತಿದೆ. ಮಾಯಾವತಿ ಇಡೀ ದೇಶವನ್ನೇ ಹಾಳು ಮಾಡುತ್ತಿದ್ದಾರೆ. ದಲಿತರ ವಿರೋಧಿ ಬಿಎಸ್ಪಿಯಾದರೇ ರಾಷ್ಟ್ರದ ವಿರೋಧಿ ಬಿಜೆಪಿ ಎಂದು ಹೇಳಿಕೆ ನೀಡಿದರು. ಸದನದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚೆ ಮಾಡುವುದನ್ನ ಬಿಟ್ಟು ಮೊಬೈಲ್ನಲ್ಲಿ ಚೆಂದದ ಹುಡುಗಿಯರ ಫೋಟೋ ನೋಡುವ ಮಹೇಶ್, ಶಾಸಕ ಸ್ಥಾನಕ್ಕೆ ಅಯೋಗ್ಯ ಎಂದರು.