ಕೊಳ್ಳೇಗಾಲ:5 ತಿಂಗಳ ಮಗುವಿನೊಟ್ಟಿಗೆ ತಾಯಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ನಡೆದಿದೆ. ಉತ್ತಂಬಳ್ಳಿ ಗ್ರಾಮದ ಶಿವಮಲ್ಲು ಎಂಬಾತನ ಪತ್ನಿ ಮೀನಾಕ್ಷಿ (20) ಹಾಗೂ ಆಕೆಯ 5 ತಿಂಗಳು ಮಗುವಿನೊಂದಿಗೆ ನಾಪತ್ತೆಯಾಗಿದ್ದಾರೆ.
ಕಳೆದ 24ರ ಮಧ್ಯರಾತ್ರಿ 1 ಗಂಟೆಗೆ ಮಗುವಿನೊಂದಿಗೆ ನನ್ನ ಹೆಂಡ್ತಿ ಅದೇ ಗ್ರಾಮದ ಜಗದೀಶ್ ಜೊತೆ ಹೋಗಿದ್ದಾಳೆ. ಜಗದೀಶ್ ಎಂಬಾತನೇ ಇದಕ್ಕೆಲ್ಲಾ ಕಾರಣ. ಅವನೊಟ್ಟಿಗೆ ತೆರಳಿದ್ದಾಳೆ ಎಂದು ಗಂಡ ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.