ಚಾಮರಾಜನಗರ: ಕೊರೊನಾ ಸೋಂಕಿತರ ಸಂಖ್ಯೆಯ ಹೆಚ್ಚಳವನ್ನು ಮಾತ್ರ ನಾವು ನೋಡುತ್ತಿದ್ದೇವೆ. ಆದರೆ, ರಾಜ್ಯದಲ್ಲಿ ಗುಣಮುಖರಾಗುತ್ತಿರುವ ಸಂಖ್ಯೆಯೂ ಹೆಚ್ಚಿನ ಸಂಖ್ಯೆಯಲ್ಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಕೊಳ್ಳೇಗಾಲದಲ್ಲಿ ಮಾತನಾಡಿ, ಇಡೀ ರಾಜ್ಯದಲ್ಲಿ ಕೊರೊನಾ ಸೋಂಕಿತರ ಪೈಕಿ ಐಸಿಯುನಲ್ಲಿರುವವರು ಕೇವಲ 16 ಮಂದಿ ಮಾತ್ರ. ರಾಜ್ಯದಲ್ಲಿ 900 ವೆಂಟಿಲೇಟರ್ ವ್ಯವಸ್ಥೆ ಇದೆ, ಆದರೆ, ಒಬ್ಬನೇ ಒಬ್ಬ ವೆಂಟಿಲೇಶನ್ನಲ್ಲಿಲ್ಲ. ಕೊರೊನಾ ಸೋಂಕಿನಿಂದ ಶೇ. 1ರಷ್ಟು ಜನರು ಮಾತ್ರ ಸಾವಿಗೀಡಾಗುತ್ತಿದ್ದಾರೆ. ಕೋವಿಡ್-19 ಉದ್ದೇಶಕ್ಕಾಗಿ ವ್ಯವಸ್ಥೆ ಮಾಡಲಾಗಿರುವ ಹಾಸಿಗೆಗಳಲ್ಲಿ ಶೇ. 7 ರಷ್ಟು ಮಂದಿ ಮಾತ್ರ ಇದ್ದಾರೆ ಎಂದು ತಿಳಿಸಿದರು.