ಚಾಮರಾಜನಗರ: ಜಮೀನಿನ ಬೆಳೆ ರಕ್ಷಣೆಗೆ ಹಾಯಿಸಿದ್ದ ಅಕ್ರಮ ವಿದ್ಯುತ್ ತಗುಲಿ ನೀರು ಕುಡಿಯಲು ಬಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಗ್ರಾಮದಲ್ಲಿ ನಡೆದಿದೆ.
ಕಗ್ಗಳದಹುಂಡಿ ಗ್ರಾಮದ ಶಿವಪ್ಪ (57) ಮೃತ ದುರ್ದೈವಿ. ಕೇರಳದ ವೈನಾಡಿನ ಅಬ್ದುಲ್ ಸುಕುರ್ ಎಂಬುವವರು ಗ್ರಾಮದಲ್ಲಿ ಜಮೀನನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿದ್ದು, ಜಮೀನಿನ ಬೆಳೆ ರಕ್ಷಣೆಗೆ ಅಕ್ರಮ ವಿದ್ಯುತ್ ಹಾಯಿಸಿದ್ದರು. ದನ ಮೇಯಿಸುತ್ತಿದ್ದ ಶಿವಪ್ಪ ನೀರು ಕುಡಿಯಲು ಸುಕುರ್ ಅವ್ರ ಜಮೀನಿಗೆ ತೆರಳಿದಾಗ ವಿದ್ಯುತ್ ಪ್ರವಹಿಸಿ ಅಸುನೀಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.