ಕರ್ನಾಟಕ

karnataka

ETV Bharat / state

5 ದಿನ, 2 ಕೋಟಿಗೂ ಹೆಚ್ಚು ಹಣ: ಮಾದಪ್ಪನ ಬೆಟ್ಟದ ಜಾತ್ರೆ - ಭಕ್ತರಿಂದ ಆದಾಯ "ಅಕ್ಷಯ ಪಾತ್ರೆ"!! - Male Mahadeshwar temple

Male Mahadeshwar temple: 5 ದಿನಗಳಲ್ಲಿ ಭಕ್ತರು ಮಾಡಿಸಿದ ವಿವಿಧ ಸೇವೆಗಳಿಂದ 2 ಕೋಟಿ ರೂ. ಆದಾಯ ಬಂದಿದೆ.

Male Mahadeshwar Temple
ಮಲೆ ಮಹದೇಶ್ವರ ದೇವಸ್ಥಾನ ದೀಪಾವಳಿ ರಥೋತ್ಸವ

By ETV Bharat Karnataka Team

Published : Nov 16, 2023, 12:57 PM IST

Updated : Nov 16, 2023, 3:36 PM IST

ಮಲೆ ಮಹದೇಶ್ವರ ದೇವಸ್ಥಾನ ದೀಪಾವಳಿ ರಥೋತ್ಸವ

ಚಾಮರಾಜನಗರ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ 10 ರಿಂದ 14ರ ವರೆಗೆ ಅದ್ಧೂರಿಯಾಗಿ ದೀಪಾವಳಿ ಜಾತ್ರೆ ನಡೆದಿದ್ದು, ಕೇವಲ 5 ದಿನಗಳ ಅವಧಿಯಲ್ಲಿ ಕ್ಷೇತ್ರಕ್ಕೆ 2.8 ಕೋಟಿ ರೂ. ಆದಾಯ ಹರಿದು ಬಂದಿದೆ.

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಈ ಬಗ್ಗೆ ಮಾಹಿತಿ ನೀಡಿದ್ದು, ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಲಕ್ಷಾಂತರ ಭಕ್ತರಿಂದ ಐದು ದಿನಗಳ ಅವಧಿಯಲ್ಲಿ ದೇವಸ್ಥಾನಕ್ಕೆ 2.8 ಕೋಟಿ ಆದಾಯ ಹರಿದು ಬಂದಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿನ್ನದ ರಥ ಸೇವೆ, ರುದ್ರಾಕ್ಷಿ ವಾಹನ, ಬೆಳ್ಳಿ ರಥ, ಲಾಡು ಮಾರಾಟ, ಮಿಶ್ರ ಪ್ರಸಾದ ಮಾರಾಟ, ಪಾರ್ಕಿಂಗ್, ವಿಶೇಷ ದರ್ಶನದ ಟಿಕೆಟ್ ಸೇರಿದಂತೆ ವಿವಿಧ ಸೇವೆಗಳಿಂದ 2,08,82,110 ರೂ. ಆದಾಯ ಬಂದಿದ್ದು, ಇದರಲ್ಲಿ ಹುಂಡಿ ಹಣ ಸೇರಿಲ್ಲ ಎಂದು ತಿಳಿಸಿದ್ದಾರೆ.

ಮಲೆ ಮಹದೇಶ್ವರ ದೇವಸ್ಥಾನ

ಯಾವ ಸೇವೆಯಿಂದ ಎಷ್ಟು ಹಣ?:ಐದು ದಿನಗಳ ಅವಧಿಯಲ್ಲಿ ಭಕ್ತರು 1,786 ಚಿನ್ನದ ರಥೋತ್ಸವ, 50 ಬೆಳ್ಳಿ ರಥೋತ್ಸವ, 1,114 ಬಸವ ವಾಹನ, 9,135 ಹುಲಿ ವಾಹನ, 410 ರುದ್ರಾಕ್ಷಿ ವಾಹನದ ಹರಕೆ ಸಲ್ಲಿಸಿದ್ದಾರೆ. ಇನ್ನು ಮಲೆ ಮಹದೇಶ್ವರ ಹುಲಿ ವಾಹನ ಉತ್ಸವದಲ್ಲಿ ಅತಿ ಹೆಚ್ಚು ಭಕ್ತರು ವಾಹನ ಎಳೆದಿದ್ದಾರೆ. ಈ ಉತ್ಸವಗಳಿಂದಲೇ 86 ಲಕ್ಷ ರೂ. ಹಣ ಪ್ರಾಧಿಕಾರಕ್ಕೆ ಸಂದಾಯವಾಗಿದೆ.

ಇನ್ನು, ಲಾಡು ಮಾರಾಟದಿಂದ 54 ಲಕ್ಷ, ಮಿಶ್ರ ಪ್ರಸಾದದಿಂದ 8 ಲಕ್ಷ, ಪುದುವಟ್ಟು ಸೇವೆಯಿಂದ 2 ಲಕ್ಷ, ಇತರ ಸೇವೆಗಳಿಂದ 5 ಲಕ್ಷ, ಪ್ರಸಾದದ ಕ್ಯಾರಿ ಬ್ಯಾಗ್​ನಿಂದಲೇ 72 ಸಾವಿರ ಹಣ ಬಂದಿದೆ. ಒಟ್ಟಾರೆ 5 ದಿನಗಳ ಅವಧಿಯಲ್ಲಿ ಕ್ಷೇತ್ರಕ್ಕೆ 2,08,82,110 ರೂ. ಆದಾಯ ಸಂಗ್ರಹವಾಗಿದೆ.

10 ಸಾವಿರ ಮಂದಿ ಪಾದಯಾತ್ರಿಗಳಿಗೆ ಪಾಸ್:ತಿರುಪತಿ ಮಾದರಿಯಲ್ಲಿ ಕಾಲ್ನಡಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬರುವ ಪಾದಯಾತ್ರಿಗಳಿಗೆ ಉಚಿತ ದರ್ಶನ, ವಸತಿ ಹಾಗೂ ದಾಸೋಹದ ಪಾಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಸುಮಾರು 10,600ಕ್ಕೂ ಹೆಚ್ಚು ಕಾಲ್ನಡಿಗೆ ಭಕ್ತರು ಈ ಪಾಸ್ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ದೀಪಾವಳಿ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ಮಲೆ ಮಹದೇಶ್ವರನ ದರ್ಶನ ಪಡೆಯುವ ಜೊತೆಗೆ ಕೋಟ್ಯಾಂತರ ರೂ. ಆದಾಯವನ್ನು ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಎಂದು ಸರಸ್ವತಿ ತಿಳಿಸಿದರು.

ಇದನ್ನೂ ಓದಿ:ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ರಥೋತ್ಸವ ಸಂಪನ್ನ: ಲಕ್ಷಾಂತರ ಭಕ್ತರು ಭಾಗಿ

Last Updated : Nov 16, 2023, 3:36 PM IST

ABOUT THE AUTHOR

...view details