ಚಾಮರಾಜನಗರ:ಮಹಾಲಯ ಅಮಾವಾಸ್ಯೆ ಪ್ರಯುಕ್ತ ಪ್ರಸಿದ್ಧ ಯಾತ್ರಾ ಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದುಬಂದು ಅಮಾವಾಸ್ಯೆ ಜಾತ್ರೆಯಲ್ಲಿ ಪಾಲ್ಗೊಂಡರು.
ಮಹಾಲಯ ಅಮಾವಾಸ್ಯೆ: ಮಾದಪ್ಪನ ಬೆಟ್ಟಕ್ಕೆ ಲಕ್ಷಾಂತರ ಮಂದಿ ದೌಡು-ಒಂದೂವರೆ ಲಕ್ಷ ಲಾಡು ಖರ್ಚು! - latest madhappan hills news
ಮಹಾಲಯ ಅಮಾವಾಸ್ಯೆ ಹಿನ್ನಲೆಯಲ್ಲಿ ಪ್ರಸಿದ್ಧ ಯಾತ್ರಾ ಸ್ಥಳ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದುಬಂದು ಅಮಾವಾಸ್ಯೆ ಜಾತ್ರೆಯಲ್ಲಿ ಪಾಲ್ಗೊಂಡರು. ಒಂದೂವರೆ ಲಕ್ಷ ಲಾಡು ಪ್ರಸಾದ ಮಾರಾಟವಾಗಿದ್ದು, 500ಕ್ಕೂ ಹೆಚ್ಚು ಮಂದಿ ಚಿನ್ನದ ರಥ ಸೇವೆಯನ್ನು ಮಾಡಿಸಿದ್ದಾರೆ. ಇನ್ನೂ ವಿಶೇಷ ದರ್ಶನದ ಟಿಕೆಟ್ಗಳು 10 ಲಕ್ಷ ರೂ. ಮಾರಾಟವಾಗಿದೆ.
ಅಂದಾಜು 2 ಲಕ್ಷಕ್ಕೂ ಅಧಿಕ ಮಂದಿ ಬೆಟ್ಟಕ್ಕೆ ಆಗಮಿಸಿದ್ದು ಶುಕ್ರವಾರ ಮತ್ತು ಶನಿವಾರ ಎರಡು ದಿನ ಸೇರಿ ಸೇವೆ, ವಿಶೇಷ ಪೂಜೆ ಒಳಗೊಂಡು ಒಂದೂವರೆ ಲಕ್ಷ ಲಾಡು ಪ್ರಸಾದ ಮಾರಾಟವಾಗಿದೆ. ಎರಡು ದಿನ ಸೇರಿ 500ಕ್ಕೂ ಹೆಚ್ಚು ಮಂದಿ ಚಿನ್ನದ ರಥ ಸೇವೆಯನ್ನು ಮಾಡಿಸಿದ್ದಾರೆ, ವಿಶೇಷ ದರ್ಶನದ ಟಿಕೆಟ್ಗಳು 10 ಲಕ್ಷ ರೂ. ಮಾರಾಟವಾಗಿದೆಯೆಂದು ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ಬರುವ ಭಕ್ತಾದಿಗಳಿಗೆ 24 ಗಂಟೆಯೂ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇನ್ನು, ಸ್ವಾಮಿಗೆ ಮುಂಜಾನೆಯಿಂದಲೇ ವಿಶೇಷ ಪೂಜೆ, ಉತ್ಸವಗಳು ನಡೆಯಿತು. ಜೊತೆಗೆ ಶಾಂತಿ ಸುವ್ಯವಸ್ಥೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನೇಮಿಸಲಾಗಿತ್ತು.