ಕರ್ನಾಟಕ

karnataka

ETV Bharat / state

'ಕೋಟಿಗೊಬ್ಬ 3' ಚಿತ್ರ ಪ್ರದರ್ಶಿಸುವಂತೆ ಕೊಳ್ಳೇಗಾಲ ಕಿಚ್ಚ ಸುದೀಪ್ ಅಭಿಮಾನಿಗಳ ಪ್ರತಿಭಟನೆ - ಕೊಳ್ಳೇಗಾಲ ಕೋಟಿಗೊಬ್ಬ 3 ಬಿಡುಗಡೆಗೆ ಪ್ರತಿಭಟನೆ

ಕೊಳ್ಳೇಗಾಲ ನಗರದ ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಿಚ್ಚ ಸುದೀಪ್​​ ಅಭಿಮಾನಿಗಳು ಪ್ರತಿಭಟನೆ ನಡೆಸಿ ಸಿನಿಮಾ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

kollegala-sudeep-fans-protest
ಕೊಳ್ಳೇಗಾಲ ಕಿಚ್ಚ ಸುದೀಪ್ ಅಭಿಮಾನಿಗಳ ಪ್ರತಿಭಟನೆ

By

Published : Oct 14, 2021, 7:48 AM IST

ಕೊಳ್ಳೇಗಾಲ: 'ಕೋಟಿಗೊಬ್ಬ 3' ಚಿತ್ರವನ್ನು ನಗರದ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡದ ಕಾರಣ ಪಟ್ಟಣದ ಕೃಷ್ಣಾ ಥಿಯೇಟರ್​ ಮುಂದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

'ಕೋಟಿಗೊಬ್ಬ 3' ಚಿತ್ರ ಪ್ರದರ್ಶಿಸುವಂತೆ ಕಿಚ್ಚ ಸುದೀಪ್ ಅಭಿಮಾನಿಗಳ ಪ್ರತಿಭಟನೆ

ಈ ಬಗ್ಗೆ ಸಂಘದ ಅಧ್ಯಕ್ಷ ಸುರೇಶ್ ಮಾತನಾಡಿ, ಚಿತ್ರ ರಿಲೀಸ್ ಮಾಡದೆ ಬೇರೆ ಚಿತ್ರವನ್ನು ಹಾಕುತ್ತಿರುವ ಚಿತ್ರಮಂದಿರದ ಮಾಲೀಕರು ಸುದೀಪ್ ಅಭಿಮಾನಿಗಳಿಗೆ ನಿರಾಶೆ ಮಾಡುತ್ತಿದ್ದಾರೆ. ಇದಕ್ಕೆ ಅಭಿಮಾನಿಗಳು ಹೆದರುವುದಿಲ್ಲ. ಕೋಟಿಗೊಬ್ಬ 3 ಹಾಕದೆ ಬೇರೆ ಚಿತ್ರ ಪ್ರದರ್ಶನ ಮಾಡಿದ್ರೆ ಉಗ್ರ ಪ್ರತಿಭಟನೆ ಮಾಡ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details