ಚಾಮರಾಜನಗರ: ಮನೆಯ ಹಂಚುಗಳನ್ನು ಇಳಿಸಿ ಕೂಲಿ ಕಾರ್ಮಿಕರ ಮನೆಗೆ ಕನ್ನ ಹಾಕಿದ್ದ ಖದೀಮ ಯುವಕರಿಬ್ಬರನ್ನು ಬೇಗೂರು ಪೊಲೀಸರು 24 ತಾಸಲ್ಲೇ ಬಂಧಿಸಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ನಾಗಮ್ಮ ಎಂಬವರ ಮನೆಗೆ ಕನ್ನ ಹಾಕಿದ್ದ ಮಾಡ್ರಳ್ಳಿ ಗ್ರಾಮದ ಪುನಿತ್ ಹಾಗೂ ಗುಂಡ್ಲುಪೇಟೆಯ ಕೆಎಚ್ ಬಿ ಕಾಲೋನಿಯ ರೆಹಾನ್ ಬಂಧಿತ ಆರೋಪಿಗಳು.
ಕಳೆದ 4ರಂದು ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದಲ್ಲಿ ನಾಗಮ್ಮ ಎಂಬವರು ಕೂಲಿ ಕೆಲಸಕ್ಕೆ ಹೋಗಿದ್ದ ವೇಳೆ ಮನೆಗೆ ನುಗ್ಗಿದ ಖದೀಮರು ಮನೆಯಲ್ಲಿದ್ದ ಬೀರುವನ್ನು ಮೀಟಿ ಅದರಲ್ಲಿದ್ದ ಸುಮಾರು 64 ಗ್ರಾಂ.ತೂಕದ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು. ಊಟಕ್ಕೆಂದು ಮನೆಗೆ ಬಂದ ನಾಗಮ್ಮ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಭಯಗೊಂಡು ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣವನ್ನು ದಾಖಲಿಸಿಕೊಂಡ ಬೇಗೂರು ಠಾಣೆಯ ಪೊಲೀಸರು 24 ತಾಸಿನಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಬೈಕ್ ಹಾಗೂ ಸುಮಾರು 1,74,000 ರೂ.ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡು, ಖದೀಮರನ್ನು ನ್ಯಾಯಾಲಯ ಬಂಧನಕ್ಕೊಪ್ಪಿಸಲಾಗಿದೆ.
ಮನೆಯೊಂದರಲ್ಲಿ ಚಿನ್ನಾಭರಣ ದೋಚಿದ್ದ ಖದೀಮರನ್ನು 24 ತಾಸಲ್ಲೇ ಸದೆಬಡಿದ ಪೊಲೀಸ್ - 24 ತಾಸುಗಳಲ್ಲಿ ಕಳ್ಳರ ಬಂಧನ
ಗುಂಡ್ಲುಪೇಟೆ ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ನಾಗಮ್ಮ ಎಂಬವರ ಮನೆಗೆ ಕನ್ನ ಹಾಕಿದ್ದ ಮಾಡ್ರಳ್ಳಿ ಗ್ರಾಮದ ಪುನಿತ್ ಹಾಗೂ ಗುಂಡ್ಲುಪೇಟೆಯ ಕೆಎಚ್ ಬಿ ಕಾಲೋನಿಯ ರೆಹಾನ್ ಬಂಧಿತ ಆರೋಪಿಗಳು.
ಕಳ್ಳರ ಬಂಧನ