ಕರ್ನಾಟಕ

karnataka

ETV Bharat / state

ಗುಂಡ್ಲುಪೇಟೆ ತ್ರಿವಳಿ ಕೊಲೆ ಪೂರ್ವ ನಿಯೋಜಿತ ಕೃತ್ಯ: ಹಣಕಾಸಿನ ಜಿದ್ದೇ ಕೊಲೆಗೆ ಕಾರಣವಂತೆ! - ತ್ರಿವಳಿ ಕೊಲೆ ಪ್ರಕರಣ

ನೂರುಲ್ಲಾ ಹಾಗೂ ಇನಾಯತ್ ಕುಟುಂಬಗಳು ಹೊಟೇಲ್ ಉದ್ಯಮ ನಡೆಸುತ್ತಿದ್ದರು. ನೂರುಲ್ಲಾ ಕುಟುಂಬ ಅಕ್ರಮ ಗೋಸಾಗಣೆಯಲ್ಲಿ ತೊಡಗಿಕೊಂಡಿತ್ತು. ಇದನ್ನು ಇನಾಯತ್ ಕುಟುಂಬ ಪೊಲೀಸರ ಗಮನಕ್ಕೆ ತಂದಿತ್ತು. ಇದು ಹಗೆತನಕ್ಕೆ ಕಾರಣವಾಗಿದೆ. ಪರಿಣಾಮ ಮಾರಾಮಾರಿ ನಡದಿದೆ.

murder

By

Published : Jun 4, 2020, 5:41 PM IST

Updated : Jun 4, 2020, 7:21 PM IST

ಚಾಮರಾಜನಗರ: ಗುಂಡ್ಲುಪೇಟೆಯ ಜಾಕಿರ್ ಹುಸೇನ್ ನಗರದ ತ್ರಿವಳಿ ಕೊಲೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ್ ತಿಳಿಸಿದರು.

ಪ್ರಕರಣ ಬೇಧಿಸಿದ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ಎರಡೂ ಕುಟುಂಬಗಳು ಹೊಟೇಲ್ ಉದ್ಯಮ ನಡೆಸುವ ಜೊತೆಗೆ ನೂರುಲ್ಲಾ ಕುಟುಂಬ ಅಕ್ರಮ ಗೋಸಾಗಣೆಯಲ್ಲಿ ತೊಡಗಿಕೊಂಡಿತ್ತು. ಇದನ್ನು ಇನಾಯತ್ ಕುಟುಂಬ ಪೊಲೀಸರ ಗಮನಕ್ಕೆ ತಂದಿತ್ತು. ಇದರಿಂದ ಅಕ್ರಮ ಗೋಸಾಗಣೆಗೆ ಬ್ರೇಕ್​​ ಬಿದ್ದಿತ್ತು. ಆದರೆ ಇದು ಎರಡೂ ಕುಟುಂಬಗಳ ನಡುವೆ ಹಗೆತನಕ್ಕೆ ಎಡೆ ಮಾಡಿಕೊಟ್ಟಿತ್ತು. ಪರಿಣಾಮ ಎರಡು ಕುಟುಂಬಗಳ ನಡುವೆ ಕಳೆದ ಮೇ 26 ರಂದು ಮಾರಾಮಾರಿ ನಡೆದು ಜಕಾವುಲ್ಲಾ, ಇದ್ರೀಸ್, ಪೈಜಲ್ ಎಂಬುವವರು ಕೊಲೆಯಾದರು ಎಂದು ಅವರು ಮಾಹಿತಿ ನೀಡಿದರು.

ಗುಂಡ್ಲುಪೇಟೆ ತ್ರಿವಳಿ ಕೊಲೆ ಪೂರ್ವ ನಿಯೋಜಿತ ಕೃತ್ಯ

ರಂಜಾನ್ ಹಬ್ಬ ಮುಗಿಯುತ್ತಿದ್ದನ್ನೇ ಕಾಯುತ್ತಿದ್ದ ಇನಾಯತ್ ಕಡೆಯವರು ಅಂದು ಮಚ್ಚು, ಲಾಂಗ್​​​, ಸತ್ತಾರ್, ಚಾಕುಗಳಿಂದ ಹಲ್ಲೆ ಮಾಡಿ ಕೊಂದಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 18 ಮಂದಿ ಆರೋಪಿಗಳನ್ನು ಗುರುತಿಸಿದ್ದು ಮೂವರು ತಲೆ ಮರೆಸಿಕೊಂಡಿದ್ದಾರೆ. ಪ್ರಕರಣದ ಗಂಭೀರತೆ ಅರಿತು ಎಎಸ್​ಪಿ ಅನಿತಾ ಹದ್ದಣನವರ್ 4 ತಂಡಗಳ ಮೂಲಕ ತನಿಖೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.

ಆರೋಪಿಗಳ ವಿವರ:

ಅನ್ಸು, ಅಸ್ಲಾಂ ಪಾಷಾ, ಇಕ್ರಂ ಪಾಷಾ, ಅನೀಸ್ ಪಾಷಾ, ಸಮೀರ್, ಇನ್ನ, ಅನ್ವರ್ ಪಾಷಾ, ಏಜಾಸ್ ಪಾಷಾ, ಮುದಸ್ಸಿರ್, ಫಾರೂಕ್, ಸುಹೇಲ್ ಪಾಷಾ, ಇಂತಿಯಾಜ್, ಅಲ್ತಾಫ್ ಪಾಷಾ, ಮುಜಾಮಿಲ್, ಅಮ್ಜಾತ್ ಪಾಷಾ ಬಂಧಿತ ಆರೋಪಿಗಳಾಗಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ತಲೆಮರೆಸಿಕೊಂಡ ಮೂವರ ಪತ್ತೆಗೆ ಬಲೆ ಬೀಸಲಾಗಿದೆ.

Last Updated : Jun 4, 2020, 7:21 PM IST

ABOUT THE AUTHOR

...view details