ಕರ್ನಾಟಕ

karnataka

ETV Bharat / state

ಗ್ರಾಮದಲ್ಲಿ ವ್ಯಾಘ್ರನ ಹೆಜ್ಜೆ ಗುರುತು: ಜನರಲ್ಲಿ ಹೆಚ್ಚಿದ ಆತಂಕ - kannada news

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕಬ್ಬೇಪುರ ಗ್ರಾಮದಲ್ಲಿ ಹುಲಿಯ ಹೆಜ್ಜೆ ಗುರುತು ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಆತಂಕ ಮುಡಿಸಿದೆ.

ಹುಲಿಯ ಹೆಜ್ಜೆಯ ಗುರುತು

By

Published : May 9, 2019, 7:42 PM IST

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಕಬ್ಬೇಪುರ ಗ್ರಾಮದ ಸುತ್ತಮುತ್ತ ಹುಲಿ ಹೆಜ್ಜೆ ಗುರುತು ಮೂಡಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ‌.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ಅರಣ್ಯ ವಲಯಕ್ಕೆ ಈ ಗ್ರಾಮ ಒಳಪಡಲಿದ್ದು, ಜನವಸತಿ ಸಮೀಪವೇ ವ್ಯಾಘ್ರನ ಸಂಚಾರದಿಂದಾಗಿ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ‌.ಕೆಲವು ತಿಂಗಳ ಹಿಂದೆಯಷ್ಟೆ ಗ್ರಾಮದ ಬಾಳೆ ತೋಟದಲ್ಲಿ ಹುಲಿ ಠಿಕಾಣಿ ಹೂಡಿ ಮರೆಯಾಗಿತ್ತು. ಅರಣ್ಯ ಇಲಾಖೆ ಆನೆಗಳೊಂದಿಗೆ ಕಾರ್ಯಾಚರಣೆ ನಡೆಸಿತಾದರೂ ಹುಲಿ ಕಾಣಿಸಿಕೊಂಡಿರಲಿಲ್ಲ.

ಈಗ ಮತ್ತೆ ಹುಲಿ ಪ್ರತ್ಯಕ್ಷವಾಗಿ ಕುರಿಯೊಂದರ ಮೇಲೆ ದಾಳಿ ಮಾಡಿದೆ. ಇದರಿಂದ ಜಮೀನುಗಳಿಗೆ ತೆರಳುವ ರೈತರು, ಸಾರ್ವಜನಿಕರು ಆತಂಕ ಮೂಡಿದೆ.

ABOUT THE AUTHOR

...view details