ಕರ್ನಾಟಕ

karnataka

6 ತಿಂಗಳಲ್ಲಿ ಕೊಟ್ಟ ಆಶ್ವಾಸನೆ ಈಡೇರಿಕೆ, ಇಲ್ಲಾ ರಾಜೀನಾಮೆ: ಗಮನ ಸೆಳೆದ ಗಡಿನಾಡ ಕನ್ನಡಿಗರ ಪ್ರಣಾಳಿಕೆ!

ಗ್ರಾಪಂ ಅಧ್ಯಕ್ಷ, ತಾಲೂಕು ಪಂಚಾಯತ್‌ನ ಎರಡು ವಾರ್ಡ್​ಗಳಿಗೆ ನಡೆಯಲಿರುವ​ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ನೀಡುತ್ತಿರುವ ಪ್ರಣಾಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.

By

Published : Dec 24, 2019, 10:50 AM IST

Published : Dec 24, 2019, 10:50 AM IST

Gram panchayath Election
Gram panchayath Election

ಚಾಮರಾಜನಗರ:ರಾಜಕಾರಣಿಗಳು ನೀಡುವ ಆಶ್ವಾಸನೆಗಳು ಈಡೇರಿಸುವುದಿರಲಿ, ಅವುಗಳನ್ನು ಮರೆಯದಿದ್ದರೇ ಸಾಕು ಎಂಬ ಸ್ಥಿತಿಯಲ್ಲಿದ್ದೇವೆ ನಾವು. ಆದರೆ ಇಲ್ಲಿ ತಾವು ನೀಡಿರುವ ಆಶ್ವಾಸನೆಗಳಿಗೆ ಕಾಲ ನಿಗದಿ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ ಗಡಿನಾಡ ಕನ್ನಡಿಗರು.

ಹೌದು, ಕನ್ನಡಿಗರೇ ಹೆಚ್ಚಿರುವ ತಮಿಳುನಾಡಿನ ತಾಳವಾಡಿ ತಾಲೂಕಿನ 4 ಗ್ರಾಮ ಪಂಚಾಯತ್​ ಕ್ಷೇತ್ರ, 2 ಗ್ರಾಮ ಪಂಚಾಯತ್​​ ಅಧ್ಯಕ್ಷ ಸ್ಥಾನ ಮತ್ತು ತಾಲೂಕು ಪಂಚಾಯತ್​​ನ 2 ವಾರ್ಡ್​​ಗಳಿಗೆ ಸ್ಪರ್ಧಿಸುತ್ತಿರುವ ಸಂಘಟನೆಯ ಅಭ್ಯರ್ಥಿಗಳು, ನಾವು ನೀಡಿರುವ ಆಶ್ವಾಸನೆಗಳನ್ನು 6 ತಿಂಗಳಿನಲ್ಲಿ ಈಡೇರಿಸದಿದ್ದರೇ ತಮ್ಮ‌ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆಂದು ಘೋಷಿಸಿಕೊಂಡಿದ್ದಾರೆ.

ಸೂರ್ಯಕಲಾ ಪ್ರಭು, ಅಭ್ಯರ್ಥಿ

ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ, ಒಳಚರಂಡಿ ಮತ್ತು ಸಿಸಿ ರಸ್ತೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿಕೊಡಲಿದ್ದೇವೆ. ಒಂದು ವೇಳೆ ನೀಡಿದ ಆಶ್ವಾಸನೆಗಳನ್ನು ಆರು ತಿಂಗಳೊಳಗೆ ಈಡೇರಿಸದಿದ್ದಲ್ಲಿ ರಾಜೀನಾಮೆ ನೀಡುತ್ತೇವೆ ಎಂದು ಗಮನ ಸೆಳೆದಿದ್ದಾರೆ.

ವೆಡಿಲ್ ಎಂಬ ಯುವಕರ ಸಂಘಟನೆ ಈಗಾಗಲೇ ಉಚಿತ ಆ್ಯಂಬುಲೆನ್ಸ್ ಸೇವೆ, ಅನಾಥ ಶವಗಳ ಅಂತ್ಯಕ್ರಿಯೆ, ಅಶಕ್ತರಿಗೆ ನೆರವು, ಯಾವುದೇ ಲಂಚ ನೀಡದೇ ಸರ್ಕಾರಿ ಕೆಲಸಗಳನ್ನು ದುರ್ಬಲ ವರ್ಗಕ್ಕೆ ಮಾಡಿಸಿಕೊಡುವ ಮೂಲಕ ತಾಳವಾಡಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.

ABOUT THE AUTHOR

...view details