ಕರ್ನಾಟಕ

karnataka

ETV Bharat / state

ಅರಣ್ಯ ಇಲಾಖೆಯಿಂದ ಹುತಾತ್ಮರ ದಿನಾಚರಣೆ

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯ ಹುತಾತ್ಮ ದಿನಾಚರಣೆ ಮಾಡಿ ಹುತಾತ್ಮ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಯಿತು.

Forest Martyrs' Day
ಹುತಾತ್ಮರ ದಿನಾಚರಣೆ

By

Published : Sep 11, 2020, 3:43 PM IST

ಗುಂಡ್ಲುಪೇಟೆ:ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕೇಂದ್ರ ಸ್ಥಾನದಲ್ಲಿ ಅರಣ್ಯ ಹುತಾತ್ಮ ದಿನಾಚರಣೆ ಮಾಡಿ ಹುತಾತ್ಮ ಸಿಬ್ಬಂದಿಗಳಿಗೆ ಗೌರವ ಸಲ್ಲಿಸಲಾಯಿತು.

ಶುಕ್ರವಾರ ಬಂಡೀಪುರದ ಸ್ವಾಗತ ಕೇಂದ್ರದ ಬಳಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಜೆಎಂಎಫ್​ಸಿ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಚಂದ್ರಶೇಖರ ಪಿ ದಿಡ್ಡಿ, ಎಸ್ .ಪಿ.ಮೋಹನ್‌ ಕುಮಾರ್ ಹಾಗೂ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ಹುತಾತ್ಮ ಸಿಬ್ಬಂದಿಗಳಿಗೆ ಸ್ಮಾರಕಕ್ಕೆ ಹೂ ಗುಚ್ಚ ಇಟ್ಟು ಗೌರವಿಸಿದರು.

ಹುತಾತ್ಮರ ದಿನಾಚರಣೆ

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶರಾದ ಚಂದ್ರಶೇಖರ ಪಿ ದಿಡ್ಡಿ, ಅರಣ್ಯ ಕಾಯುವುದು ಸುಲಭವಾದ ಕೆಲಸವಲ್ಲ ಎಂದ ಅವರು ಯಾವುದೇ ಕೆಲಸವನ್ನಾದರೂ ಸರಿ ಮನಸ್​ ಪೂರ್ವಕವಾಗಿ ಮಾಡಬೇಕು. ನಾವು ದೇಶಕ್ಕಾಗಿ ಸೇವೆ ಮಾಡುತ್ತಿದ್ದೇವೆ ಎಂಬ ಆತ್ಮಗೌರವ ಬೆಳೆಸಿಕೊಳ್ಳಲು ತಿಳಿಸಿದರು.

ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಮಾತನಾಡಿ, ಕಳೆದ 54 ವರ್ಷಗಳಿಂದ ಬಂಡೀಪುರ ರಾಷ್ಟ್ರೀಯ ಹುುಲಿ ಸಂರಕ್ಷಿತ ಪ್ರದೇಶದಲ್ಲಿ 54 ಜನರು ಹುತಾತ್ಮರಾಗಿದ್ದಾರೆ ಅವರನ್ನು ನೆನೆಯಬೇಕಿದೆ. ಅನೇಕ ಕರ್ತವ್ಯದಲ್ಲಿ ಇದ್ದಾಗ ವಿವಿಧ ಕಾರಣದಿಂದ ಪ್ರಾಣ ಕಳೆದುಕೊಂಡರು. ಈ ತರಹದ ಘಟನೆಗಳು ನಡೆಯಬಾರದು, ಸದಾ ಇವರನ್ನು ನೆನೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸಿಎಫ್ ರವಿಕುಮಾರ್, ಕೆ.ಪರಮೇಶ, ವಲಯಾರಣ್ಯಾಧಿಕಾರಿ ನವೀನ್ ಕುಮಾರ್, ಶ್ರೀನಿವಾಸ್, ಮಹದೇವಯ್ಯ, ಆನೆ ವೈದ್ಯ ನಾಗರಾಜು ಇತರರು ಇದ್ದರು.

ABOUT THE AUTHOR

...view details