ಚಾಮರಾಜನಗರ: ಸದಾ ಪ್ರಾಣಿ ಭಯ, ಜೋರು ಮಳೆಗೆ ಹೈರಾಣಾಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಈಗ ನಿರಾಳರಾಗಿದ್ದಾರೆ. ಕಂಟೇನರ್ ಹೋಮ್ (Container Home)ನಲ್ಲಿ ನೆಮ್ಮದಿಯಿಂದ ರಾತ್ರಿ ಕಳೆಯುತ್ತಿದ್ದಾರೆ.
ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ (Biligiri Rangaswamy Temple Wildlife Sanctuary) ಪುಣಜನೂರು ವಲಯದಲ್ಲಿ ಎರಡು ಕಂಟೇನರ್ ಹೌಸ್ಗಳನ್ನು ನಿರ್ಮಿಸಲಾಗಿದೆ.
ಇವನ್ನು ಅವಶ್ಯಕತೆ ಬಿದ್ದಾಗ ಯಾವಾಗ ಬೇಕಾದರೂ ಸ್ಥಳಾಂತರ ಮಾಡಬಹುದು. ಜೊತೆಗೆ ಮಳೆ, ಚಳಿಗಾಲದಲ್ಲಿ ಬೆಚ್ಚಗೆಯ ವಾತಾವರಣ, ಬೇಸಿಗೆಯಲ್ಲಿ ತಂಪನೆ ವಾತಾವರಣ ನೀಡುವುದು ಈ ಕಂಟೇನರ್ ಹೋಮ್ಸ್ ವಿಶೇಷತೆ.
ಅರಣ್ಯ ಇಲಾಖೆ ಸಿಬ್ಬಂದಿಗಾಗಿ ನಿರ್ಮಿಸಿದ ಲಾರಿ ಕಂಟೇನರ್ ಮನೆ.. ಈ ಕುರಿತು ಮಾತನಾಡಿದ ಬಿಆರ್ಟಿ ಡಿಸಿಎಫ್ ಸಂತೋಷ್ ಕುಮಾರ್, ಮಹಾರಾಷ್ಟ್ರದಿಂದ 3.5 ಲಕ್ಷ ರೂ.ಗೆ ಈ ಮನೆಗಳನ್ನು ಖರೀಸಲಾಗಿದೆ. ಹೆಚ್ಚುವರಿ ಒಂದೂವರೆ ಲಕ್ಷ ರೂ. ವ್ಯಯಿಸಿ ಇಬ್ಬರು ಸಿಬ್ಬಂದಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಚೆಕ್ ಪೋಸ್ಟ್ನಲ್ಲಿ ಒಂದು ಲಾರಿ ಕಂಟೇನರ್ ಮನೆ ಇಡಲಾಗಿದೆ. ಬೂದಿಪಡಗದಲ್ಲಿ ಮತ್ತೊಂದು ಮನೆ ಇಡಲಾಗಿದೆ. ಈ ಕಂಟೇನರ್ ಮನೆಯನ್ನು ಯಾವಾಗ ಬೇಕಾದ್ರೂ ಇಚ್ಛೆ ಬಂದ ಕಡೆ ಸ್ಥಳಾಂತರ ಮಾಡಿಕೊಳ್ಳಬಹುದಾಗಿದೆ ಎಂದರು.
ಏನೇನಿದೆ ಲಾರಿ ಕಂಟೇನರ್ ಮನೆಯಲ್ಲಿ? :ಗಾಳಿ-ಬೆಳಕಿಗಾಗಿ 6 ಕಿಟಕಿಗಳಿವೆ, ನೀರಿನ ಟ್ಯಾಂಕ್ ಇದೆ. ಚಿಕ್ಕ ಲಿವಿಂಗ್ ರೂಂ, ಅಡುಗೆ ಕೋಣೆ, ಒಂದು ಬೆಡ್ ರೂಂ, ಶೌಚಾಲಯ, ಸ್ನಾನದ ಗೃಹವಿದೆ. ಸ್ವಚ್ಛ ಮಾಡಲು ಅನುಕೂಲವಾಗುವಂತೆ ಮನೆಯನ್ನು ರೂಪಿಸಲಾಗಿದೆ.