ಕರ್ನಾಟಕ

karnataka

ETV Bharat / state

ಪರಿಸರ ಪ್ರೇಮಿಯ ಕಾಳಜಿ: ವಿದೇಶಿ ಹೂ ಸ್ವದೇಶಿ ನೆಲದಲ್ಲಿ ಅರಳಿದಾಗ! - etv bharat

ವಿದೇಶಿ ಹೂವುಗಳನ್ನು ಬೆಳೆಸಿದ ಪರಿಸರ ಪ್ರೇಮಿಯೊಬ್ಬರು ಅದರ ವಿಶಿಷ್ಟತೆಯನ್ನು ಇತರರಿಗೂ ತೋರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಬಿಸಿಲ ಬೇಗೆಯಲ್ಲಿ ಅರಳಿ ನಿಂತ ವಿದೇಶಿ ಹೂವುಗಳು

By

Published : Apr 26, 2019, 11:08 PM IST

ಚಾಮರಾಜನಗರ:ಸುಡು ಬಿಸಿಲಲ್ಲೂ ನಗು ಬೀರುವ ಚೆಲುವೆಯರು... ಬಿಸಿಲ ಬೇಗೆಯಲ್ಲಿ ಅರಳಿ ನಿಂತ ಹೂವು ಕಂಡು ಮುದಗೊಂಡ ಸ್ಥಳೀಯರು... ನಗರದ ನ್ಯಾಯಾಲಯ ರಸ್ತೆಯಲ್ಲಿನ ಮುರಳಿ ಎಂಬವರ ಮನೆಯಲ್ಲಿ ಮಲೇಷ್ಯಾ ಮತ್ತು ಸಿಂಗಾಪುರದ 10ಕ್ಕೂ ಹೆಚ್ಚು ಕ್ಯಾಕ್ಟಸ್ ಗ್ಲೋಬ್ ಅರಳಿ ನಿಂತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ.

ಬಿಸಿಲ ಬೇಗೆಯಲ್ಲಿ ಅರಳಿ ನಿಂತ ವಿದೇಶಿ ಹೂವುಗಳು

ಸಾಮಾನ್ಯವಾಗಿ ವಿದೇಶಿ ಗಿಡಗಳು ಅಥವಾ ಹೂವುಗಳನ್ನು ನೋಡಬೇಕಾದರೆ ಫೋಟೋ ಹಾಗೂ ಟಿವಿಗಳಲ್ಲಿ ನೋಡಬೇಕಾಗುತ್ತದೆ. ಆದರೆ, ಇವರು ತಮ್ಮ ಮನೆಯ ಅಂಗಳದಲ್ಲೇ ವಿದೇಶಿ ಗಿಡಗಳನ್ನು ನೆಟ್ಟು ಆ ಗಿಡಗಳ ಹೂವು ಅರಳುವುದನ್ನು ಅಕ್ಕಪಕ್ಕದ ಮನೆಯವರು ಹಾಗೂ ಸ್ನೇಹಿತರಿಗೆ ತೋರಿಸುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಸಿಂಗಾಪುರ ಹಾಗೂ ಮಲೇಷ್ಯಾದ ಗ್ಲೋಬ್ ಅರಳಿ ಎರಡು ಮೂರು ಗಂಟೆಯಲ್ಲೇ ಬಾಡಿ ಹೋಗುವ ಗುಣ ಹೊಂದಿವೆ. ಇನ್ನೊಂದಷ್ಟು ಕ್ಯಾಕ್ಟಸ್​ಗಳು ರಾತ್ರಿ ಹೂ ಬಿಟ್ಟು ಸೂರ್ಯನ ಕಿರಣ ತಾಗುತ್ತಿದ್ದಂತೆ ಬಾಡುತ್ತವೆ ಎನ್ನುತ್ತಾರೆ ಪರಿಸರ ಪ್ರೇಮಿ ಮುರಳಿ.

ABOUT THE AUTHOR

...view details