ಕರ್ನಾಟಕ

karnataka

ETV Bharat / state

ಕೆರೆಗೆ ನೀರು ತುಂಬುವಂತೆ ಪ್ರತಿಭಟನೆ: ಕೆರೆಗಿಳಿದು ರೈತರ ಆತ್ಮಹತ್ಯೆ ಬೆದರಿಕೆ

ಉತ್ತೂರು ಕೆರೆಯಿಂದ ವಡ್ಡಗೆರೆಗೆ ನೀರು ಬಿಡಬೇಕೆಂದು ಆಗ್ರಹಿಸಿರುವ ರೈತರ ಹೋರಾಟ ತೀವ್ರವಾಗಿದ್ದು, ಇಬ್ಬರು ರೈತರು ಕೆರೆಗಿಳಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ನಡೆದಿದೆ.

ರೈತರ ಪ್ರತಿಭಟನೆ

By

Published : Jun 18, 2019, 7:28 PM IST

Updated : Jun 18, 2019, 9:31 PM IST

ಚಾಮರಾಜನಗರ:ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಮೀಪದ ಉತ್ತೂರು ಕೆರೆಯಿಂದ ವಡ್ಡಗೆರೆಗೆ ನೀರು ಬಿಡಬೇಕೆಂದು ಆಗ್ರಹಿಸುತ್ತಿರುವ ರೈತರ ಹೋರಾಟ ತೀವ್ರವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ. ಪುಟ್ಟರಂಗಶೆಟ್ಟಿ ನೀರು ಬಿಡದೇ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಇಬ್ಬರು ರೈತರು ಕೆರೆಗಿಳಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ರೈತರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ.

ರೈತರ ಪ್ರತಿಭಟನೆ

ಘಟನಾ ಸ್ಥಳಕ್ಕೆ ಅಸಿಸ್ಟೆಂಟ್ ಕಮೀಷನರ್‌ ಭೇಟಿ ನೀಡಿದ್ದು ಅಹವಾಲು ಆಲಿಸಿದ್ದಾರೆ.ನಾಳೆಯೂ ಕೂಡ ರೈತರ ಅಹೋರಾತ್ರಿ ಧರಣಿ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿದ್ದು, ಉತ್ತೂರು ಕೆರೆಯಂಗಲದಲ್ಲಿ ಪೊಲೀಸ್ ಬಿಗಿಭದ್ರತೆ ಇದೆ.

Last Updated : Jun 18, 2019, 9:31 PM IST

For All Latest Updates

TAGGED:

ABOUT THE AUTHOR

...view details