ಕರ್ನಾಟಕ

karnataka

ETV Bharat / state

ಜಮೀನಿನಲ್ಲಿ ಅಗ್ನಿ ಆಕಸ್ಮಿಕ: ಬೆಳೆ ಸಂಗ್ರಹಿಸುತ್ತಿದ್ದ ರೈತ ಸಾವು - farmer burned during crop spreading in land

ಪಕ್ಕದ ಜಮೀನಿನಲ್ಲಿ‌ ದಿಢೀರನೆ ಹೊತ್ತಿಕೊಂಡ ಬೆಂಕಿ ಮತ್ತೊಬ್ಬ ರೈತನ ಜಮೀನಿಗೂ ಆವರಿಸಿ ಹೊಗೆ ಹೆಚ್ಚಾದ ಪರಿಣಾಮ ಉಸಿರಾಡಲಾಗದೇ ರೈತ ಮೃತಪಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಅಮಚವಾಡಿ ಗ್ರಾಮದಲ್ಲಿ ಸಂಭವಿಸಿದೆ.

farmer burned during crop spreading in land
ಬೆಳೆ ಸಂಗ್ರಹಿಸುತ್ತಿದ್ದ ರೈತ ಸಾವು

By

Published : Feb 2, 2021, 12:03 PM IST

ಚಾಮರಾಜನಗರ:ಜಮೀನಿನಲ್ಲಿ ಬೆಳೆ ಸಂಗ್ರಹಿಸುತ್ತಿದ್ದ ರೈತನೋರ್ವ ಅಗ್ನಿ ಆಕಸ್ಮಿಕದಲ್ಲಿ ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ನಡೆದಿದೆ.
ಅಮಚವಾಡಿ ಗ್ರಾಮದ ಮಹದೇವನಾಯಕ(63) ಮೃತ ವ್ಯಕ್ತಿ. ಪಕ್ಕದ ಜಮೀನಿನಲ್ಲಿ‌ ದಿಢೀರ್ ಹೊತ್ತಿಕೊಂಡ ಬೆಂಕಿ ಮೃತರ ಜಮೀನಿಗೂ ವ್ಯಾಪಿಸಿತ್ತು ಎನ್ನಲಾಗಿದೆ. ಈ ವೇಳೆ ಹುರುಳಿ ಸಂಗ್ರಹಿಸುತ್ತಿದ್ದ ಮಹದೇವನಾಯ್ಕ ಬೆಂಕಿಗೆ ಸಿಲುಕಿ ಉಸಿರಾಡಲಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಬೆಳೆ ಕೈ ಸೇರಿತು ಎನ್ನುವಷ್ಟರಲ್ಲಿ‌ ರೈತನೇ ಮೃತಪಟ್ಟಿರುವುದು ಮನಕಲಕುವಂತಿದ್ದು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಬೆಲೆ ಯಾವುದೇ ಕಾರಣಕ್ಕೂ ಏರಿಕೆಯಿಲ್ಲ: ಕೇಂದ್ರ ಸಚಿವ ಜಾವಡೇಕರ್

ABOUT THE AUTHOR

...view details