ಕೊಳ್ಳೇಗಾಲ: ಒಂಟಿ ಸಲಗವೊಂದು ಆಕಸ್ಮಿಕವಾಗಿ ಹನೂರು ಅರಣ್ಯ ವ್ಯಾಪ್ತಿಯ ಬಾಳೆವನವಡ್ಡು ಬೀಟ್ನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹನೂರು ಬಳಿ 60 ವರ್ಷದ ಆನೆ ಕಳೇಬರ ಪತ್ತೆ
ಹನೂರು ಪಟ್ಟಣದ ಹೊರವಲಯದಲ್ಲಿರುವ ಬಾಳೆವನವಡ್ಡು ಸಮೀಪ 60 ವರ್ಷದ ಆನೆಯ ಕಳೇಬರ ಪತ್ತೆಯಾಗಿದೆ.
ಆನೆ ಕಳೇಬರ ಪತ್ತೆ
ಹನೂರು ಪಟ್ಟಣದ ಹೊರವಲಯದಲ್ಲಿರುವ ಬಾಳೆವನವಡ್ಡು ಸಮೀಪ ಗಂಡಾನೆಯೊಂದು ಮೃತಪಟ್ಟಿದೆ ಎಂದು ಸ್ಥಳೀಯ ರೈತರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಸ್ಥಳಿಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಲೆಮಹದೇಶ್ವರ ವನ್ಯ ಜೀವಿ ವಿಭಾಗದ ಡಿಎಫ್ಒ ಮಾತನಾಡಿ, 60 ವರ್ಷದ ಸಲಗವೊಂದು ಸಾವನ್ನಪ್ಪಿರುವುದು ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವಗಿರುವುದು ತಿಳಿದು ಬಂದಿದೆ ಎಂದರು.
Last Updated : May 29, 2021, 3:19 PM IST