ಚಾಮರಾಜನಗರ :ಕೊರೊನಾ ನಡುವೆ ಸಂಭ್ರಮದಿಂದ ಪಟಾಕಿ ಸುಡುವವರ ಮಧ್ಯೆ ಬಾಹ್ಯದ ಕಣ್ಣನ್ನಷ್ಟೇ ಕಳೆದುಕೊಂಡಿರುವ ಅಂಧರ ಶಾಲೆಯಲ್ಲಿ ನಿವೃತ್ತ ಶಿಕ್ಷಕರು ಅರ್ಥಪೂರ್ಣವಾಗಿ ಬೆಳಕಿನ ಹಬ್ಬ ಆಚರಿಸಿದ್ದಾರೆ.
ಅಂಧರ ಶಾಲೆಯಲ್ಲಿ ಬೆಳಕಿನ ಹಬ್ಬ.. ವಿದ್ಯಾರ್ಥಿಗಳಿಗೆ ಬ್ಯಾಗ್, ಬ್ಲಾಂಕೇಟ್ ಕೊಟ್ಟ ನಿವೃತ್ತ ಶಿಕ್ಷಕರು
ಅಂಧರ ಶಾಲೆಯಲ್ಲಿ ನಿವೃತ್ತ ಶಿಕ್ಷಕರು ಅರ್ಥಪೂರ್ಣವಾಗಿ ದೀಪಾವಳಿ ಹಬ್ಬವನ್ನು ಆಚರಿಸಿದರು. ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಹೊದಿಕೆಗಳು ಹಾಗೂ ಸಿಹಿ ವಿತರಿಸಿ ದೀಪಾವಳಿ ಆಚರಿಸಿದರು..
ಹೆಬ್ಬಸೂರಿನ ನಿವೃತ್ತ ಮುಖ್ಯಶಿಕ್ಷಕ ರಾಜೇಂದ್ರ ಹಾಗೂ ಮೈಸೂರಿನ ನಿವೃತ್ತ ಶಿಕ್ಷಕಿ ಅನ್ನಪೂರ್ಣ, ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರು ಸಂಯುಕ್ತವಾಗಿ ಬೋಗಾಪುರದಲ್ಲಿರುವ ದೀಪ ಅಂಧರ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಹೊದಿಕೆಗಳು ಹಾಗೂ ಸಿಹಿ ವಿತರಿಸಿ ದೀಪಾವಳಿ ಆಚರಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ಅಷ್ಟೇ ಅಲ್ಲ, ವಿದ್ಯಾರ್ಥಿಗಳೇ ನಾಡಿನ ಮುಂದಿನ ಬೆಳಕು ಎಂಬ ಕಲ್ಪನೆಯಡಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಭವಿಷ್ಯದಲ್ಲಿ ನೂರಾರು ಸನ್ಮಾನಗಳನ್ನು ಸ್ವೀಕರಿಸುವಂತ ಪ್ರತಿಭಾವಂತರಾಗಬೇಕೆಂದು ಆಶಿಸಿದರು. ಪಿಎಸ್ಐ ಸಿದ್ದರಾಜನಾಯ್ಕ, ಸಾಹಿತಿ ಶ್ರೀಧರ್ ಇದ್ದರು.