ಕರ್ನಾಟಕ

karnataka

ಸಿಲಿಂಡರ್ ಸ್ಫೋಟದಿಂದ ಮನೆಗೆ ಬೆಂಕಿ: ಮೊಮ್ಮಗಳ ಸಮಯಪ್ರಜ್ಞೆ ಉಳಿಸಿತು ಅಜ್ಜಿಯ ಜೀವ

By

Published : Sep 8, 2021, 10:56 PM IST

Updated : Sep 8, 2021, 11:52 PM IST

ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದಲ್ಲಿ ಸಿಲಿಂಡರ್​ ಸ್ಫೋಟಗೊಂಡಿದ್ದು, ಮೊಮ್ಮಗಳ ಸಮಯಪ್ರಜ್ಞೆಯಿಂದ ಮುಂದಾಗುತ್ತಿದ್ದ ಅನಾಹುತ ತಪ್ಪಿದೆ.

ಸಿಲಿಂಡರ್ ಸ್ಫೋಟಕ್ಕೆ ಮನೆ ಧಗ-ಧಗ
ಸಿಲಿಂಡರ್ ಸ್ಫೋಟಕ್ಕೆ ಮನೆ ಧಗ-ಧಗ

ಚಾಮರಾಜನಗರ: ಸಿಲಿಂಡರ್ ಸ್ಫೋಟಕ್ಕೆ ಮನೆ ಧಗಧಗಿಸಿ ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದಲ್ಲಿ ನಡೆದಿದೆ.

ಸೊಸೆ ಊರಿಗೆ ಹೋಗಿದ್ದರಿಂದ 75 ವರ್ಷದ ಲಕ್ಷ್ಮಮ್ಮ ಎಂಬುವರು ಅಡುಗೆ ಮಾಡುತ್ತಿದ್ದ ವೇಳೆ ಸಿಲಿಂಡರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಮೊಮ್ಮಗಳು ಮೇಘನಾ (17) ಕೂಡಲೇ ಅಜ್ಜಿಯನ್ನು ಹೊರಗೆ ಕರೆತಂದಿದ್ದಾರೆ.

ಸಿಲಿಂಡರ್ ಸ್ಫೋಟದಿಂದ ಮನೆಗೆ ಬೆಂಕಿ

ಅಜ್ಜಿ ಮತ್ತು ಮೊಮ್ಮಗಳು ಹೊರಗೆ ಬರುತ್ತಿದ್ದಂತೆ ಸಿಲಿಂಡರ್ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಮನೆಗೆ ವ್ಯಾಪಿಸಿ ಹೊತ್ತಿ ಉರಿಯಿತು. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.

ಅವಘಡದ ವೇಳೆ, ಲಕ್ಷ್ಮಮ್ಮ ಅವರ ಮಗ ವೆಂಕಟೇಶ್ ಹಾಗೂ ಮೊಮ್ಮಗ ಅಂಗಡಿಗೆ ತೆರಳಿದ್ದರು ಎಂದು ತಿಳಿದುಬಂದಿದೆ. ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Last Updated : Sep 8, 2021, 11:52 PM IST

ABOUT THE AUTHOR

...view details