ಕರ್ನಾಟಕ

karnataka

ETV Bharat / state

ಸೈಕ್ಲೋನ್ ಎಫೆಕ್ಟ್: ಜಿಟಿಜಿಟಿ ಮಳೆ ನಡುವೆ ಎರಡನೇ ಬಾರಿ ಮಾದಪ್ಪನ ದರ್ಶನ ಪಡೆದ ಸಿಎಂ - ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಳೆಯ ನಡುವೆ ಎರಡನೇ ಬಾರಿಗೆ ಸಚಿವರೊಂದಿಗೆ ಪವಾಡ ಪುರುಷನನ್ನು ಕಣ್ತುಂಬಿಕೊಂಡರು.

CM
ಸಿಎಂ

By

Published : Nov 26, 2020, 9:32 AM IST

ಚಾಮರಾಜನಗರ:ಸೈಕ್ಲೋನ್ ಎಫೆಕ್ಟ್​ನಿಂದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಬುಧವಾರ ರಾತ್ರಿಯಿಂದ ಜಿಟಿಜಿಟಿ ಮಳೆಯಾಗುತ್ತಿದ್ದು, ಸಿಎಂ ಯಡಿಯೂರಪ್ಪ ಮಳೆಯ ನಡುವೆಯೇ ಎರಡನೇ ಬಾರಿ ಮಾದಪ್ಪನ ದರ್ಶನ ಪಡೆದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಳೆಯ ನಡುವೆ ಎರಡನೇ ಬಾರಿಗೆ ಸಚಿವರೊಂದಿಗೆ ಪವಾಡ ಪುರುಷನನ್ನು ಕಣ್ತುಂಬಿಕೊಂಡರು.

ಜಿಟಿಜಿಟಿ ಮಳೆ ನಡುವೆ ಎರಡನೇ ಬಾರಿ ಮಾದಪ್ಪನ ದರ್ಶನ ಪಡೆದ ಸಿಎಂ

ಮಲೆ ಮಹದೇಶ್ವರಬೆಟ್ಟದಲ್ಲಿ ನೂರಾರು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣ ವಾಗಿರುವ ಹಾಗೂ ನಿರ್ಮಾಣವಾಗಬೇಕಿರುವ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೂ ಮೊದಲು ಸಚಿವರಾದ ಸುರೇಶ್ ಕುಮಾರ್, ಕೋಟಾ ಶ್ರೀನಿವಾಸಪೂಜಾರಿ ಅವರೊಂದಿಗೆ ದೇಗುಲಕ್ಕೆ ಭೇಟಿ ನೀಡಿದರು.

ಭಕ್ತರ ಪರದಾಟ: ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಭಕ್ತರು ಪರದಾಡಿದ ಘಟನೆ ನಡೆಯಿತು. ಸಿಎಂ ಕಾರ್ಯಕ್ರಮ ನಡೆಯುವ ರಂಗಮಂದಿರಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲದಿದ್ದರಿಂದ ವರುಣನಿಂದ ತಪ್ಪಿಸಿಕೊಳ್ಳಲು ಜನರು ಪರದಾಡಬೇಕಾಯಿತು.

ABOUT THE AUTHOR

...view details