ಚಾಮರಾಜನಗರ:ನಟಪುನೀತ್ ರಾಜ್‍ಕುಮಾರ್ ಮಾಸ್ ಹೀರೋ ಅಷ್ಟೇ ಅಲ್ಲದೇ, ಮಕ್ಕಳ ಅಚ್ಚುಮೆಚ್ಚಿನ ನಟರಾಗಿದ್ದರು ಎಂಬುದಕ್ಕೆ ಚಾಮರಾಜನಗರದಲ್ಲಿ ನಡೆದ ಘಟನೆಯೇ ಸಾಕ್ಷಿ.
ಚಾಮರಾಜನಗರದ ಸೋಮವಾರಪೇಟೆ ಬಡಾವಣೆಯಲ್ಲಿನ ಮಕ್ಕಳು, ಅಪ್ಪು ನಿಧನದ ಹಿನ್ನೆಲೆಯಲ್ಲಿ ತಮ್ಮ ಪೋಷಕರನ್ನು ಕಾಡಿ-ಬೇಡಿ ಅಪ್ಪುವಿನ ಪುಣ್ಯಸ್ಮರಣೆ ಕಾರ್ಯಕ್ರಮ ಮಾಡಿಸಿದ್ದಾರೆ.
ಮಕ್ಕಳ ಆಸೆಯಂತೆ ಪೋಷಕರೂ ಕೂಡ ಅಪ್ಪು ಚಿತ್ರವುಳ್ಳ ಫ್ಲೆಕ್ಸ್ ತಯಾರಿಸಿ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ, ದಾರಿಹೋಕರಿಗೆ, ಬಡಾವಣೆಯ ಜನರಿಗೆ ರಾತ್ರಿ ಭೋಜನ ತಯಾರಿಸಿ ಉಣ ಬಡಿಸಿ ಅಪ್ಪುವಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇನ್ನು, ಮೇಣದ ಬತ್ತಿ ಹಿಡಿದ ಮಕ್ಕಳು ಪುನೀತ್ ಅಭಿನಯದ ರಾಜಕುಮಾರ ಚಿತ್ರದ "ನೀನೆ ರಾಜಕುಮಾರ" ಹಾಡು ಹಾಡಿ ಗೀತನಮನ ಸಲ್ಲಿಸಿದ್ದಾರೆ.