ಕರ್ನಾಟಕ

karnataka

ETV Bharat / state

ಚಾಮರಾಜನಗರ ಜಿಲ್ಲಾಧಿಕಾರಿಗೆ ಕೋವಿಡ್ ದೃಢ.. ಎರಡೂ ಡೋಸ್ ಲಸಿಕೆ ಪಡೆದಿದ್ದ ಡಿಸಿ! - ಚಾಮರಾಜನಗರ ಡಿಸಿಗೆ ಕೋವಿಡ್

ಕೋವಿಡ್​ಗೆ ತುತ್ತಾಗಿರುವ ಜಿಲ್ಲಾಧಿಕಾರಿ ಎರಡೂ ಡೋಸ್​ ಕೋವಿಡ್ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದು 27 ದಿನ ಕಳೆದಿದೆ. ಜಿಲ್ಲಾಧಿಕಾರಿಗಳ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಸೋಮವಾರ ಮತ್ತು ಮಂಗಳವಾರ ಪರೀಕ್ಷೆಗೊಳಪಡಿಸುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ..

Chamarajnagar DC tested positive for Covid-19
ಚಾಮರಾಜನಗರ ಜಿಲ್ಲಾಧಿಕಾರಿಗೆ ಕೋವಿಡ್ ದೃಢ

By

Published : Apr 4, 2021, 11:01 PM IST

ಚಾಮರಾಜನಗರ : ಜಿಲ್ಲಾಧಿಕಾರಿ ಡಾ. ಎಂ ಆರ್ ರವಿ ಅವರಿಗೆ ಕೋವಿಡ್​‌ ಪಾಸಿಟಿವ್ ದೃಢಪಟ್ಟಿದೆ. ಸದ್ಯ ಹೋಂ‌ ಐಸೋಲೇಷನ್​ನಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು‌‌ ತಿಳಿಸಿವೆ.

ಜಿಲ್ಲಾಧಿಕಾರಿಗೆ ಎರಡು ದಿನಗಳ ಹಿಂದೆ ನೆಗಡಿ, ಗಂಟಲು ನೋವು ಕಾಣಿಸಿದ್ದರಿಂದ ಶನಿವಾರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು. ಇಂದು ಫಲಿತಾಂಶದಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಓದಿ :ಕೊರೊನಾ 2ನೇ ಅಲೆ.. ಪ್ರವಾಸಿ ತಾಣಗಳ ಮೇಲಿನ ನಿರ್ಬಂಧ ಬೇಡ ಅಂತಾರೆ ವ್ಯಾಪಾರಸ್ಥರು

ಕಳವಳಕಾರಿ ಸಂಗತಿಯೆಂದರೆ, ಕೋವಿಡ್​ಗೆ ತುತ್ತಾಗಿರುವ ಜಿಲ್ಲಾಧಿಕಾರಿ ಎರಡೂ ಡೋಸ್​ ಕೋವಿಡ್ ಲಸಿಕೆ ಪಡೆದಿದ್ದಾರೆ. ಲಸಿಕೆ ಪಡೆದು 27 ದಿನ ಕಳೆದಿದೆ. ಜಿಲ್ಲಾಧಿಕಾರಿಗಳ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಸೋಮವಾರ ಮತ್ತು ಮಂಗಳವಾರ ಪರೀಕ್ಷೆಗೊಳಪಡಿಸುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ.

ABOUT THE AUTHOR

...view details