ಕರ್ನಾಟಕ

karnataka

ETV Bharat / state

ಕೇರಳದಲ್ಲಿ ನ್ಯೂರೋ‌ ವೈರಸ್ ಪತ್ತೆ: ಚಾಮರಾಜನಗರ ಗಡಿಯಲ್ಲಿ ಕಟ್ಟೆಚ್ಚರ, ವಿಶೇಷ ಗಮನ - ಚಾಮರಾಜನಗರದಲ್ಲಿ ನ್ಯೂರೋ‌ ವೈರಸ್ ಎಚ್ಚರಿಕೆ

ನ್ಯೂರೋ‌ ವೈರಸ್ ಹಿನ್ನೆಲೆಯಲ್ಲಿ ಕೇರಳ - ಕರ್ನಾಟಕ ಗಡಿಯಲ್ಲಿರುವ ಗುಂಡ್ಲುಪೇಟೆ ತಾಲೂಕಿನ ಗಡಿಯಂಚಿನ ಗ್ರಾಮ (norovirus alert in Chamarajanagar) ಮತ್ತು ಹಾಡಿಗಳ ಜನರು ಯಾವುದೇ ಆತಂಕಕ್ಕೆ ಒಳಗಾಗದೇ, ವೈಯಕ್ತಿಕ ಸ್ವಚ್ಛತೆ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಅರಿವು ಮೂಡಿಸುತ್ತಿದೆ.

chamarajanagara-on-alert-as-kerala-reports-norovirus-cases
ಕೇರಳದಲ್ಲಿ ನ್ಯೂರೋ‌ ವೈರಸ್ ಪತ್ತೆ: ಚಾಮರಾಜನಗರ ಗಡಿಯಲ್ಲಿ ಕಟ್ಟೆಚ್ಚರ, ವಿಶೇಷ ಗಮನ

By

Published : Nov 19, 2021, 2:28 PM IST

ಚಾಮರಾಜನಗರ: ಕೋವಿಡ್-19 ಸೇರಿ ಕೇರಳದ ವಯನಾಡಿನಲ್ಲಿ ಹೊಸ ವೈರಾಣು ನ್ಯೂರೋ ವೈರಸ್(Norovirus case in kerala) ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಮೂಲೆಹೊಳೆ ಚೆಕ್‍ ಪೋಸ್ಟ್ ಪ್ರವೇಶಿಸುವವರ ಮೇಲೆ ವಿಶೇಷ ಗಮನ ಇಡಲಾಗಿದೆ.

ದೇಶದಲ್ಲಿಯೇ ಕೊರೊನಾ, ನಿಫಾ, ಡೆಲ್ಟಾ(delta) ಸೇರಿದಂತೆ ಹೊಸ ವೈರಸ್‍ಗಳು ಕೇರಳದಲ್ಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದ್ದು, ಇದೀಗ ಕೇರಳದಲ್ಲಿ ಕಂಡು ಬಂದಿರುವ ವೈರಸ್ ಪಟ್ಟಿಗೆ ಹೊಸದಾಗಿ ನ್ಯೂರೋ ವೈರಸ್ ಸೇರಿಕೊಂಡಿದೆ. ಇದರಿಂದ ಕೇರಳ - ಕರ್ನಾಟಕ ಗಡಿಯಲ್ಲಿರುವ ಗುಂಡ್ಲುಪೇಟೆ ತಾಲೂಕಿನ ಗಡಿಯಂಚಿನ ಗ್ರಾಮ ಮತ್ತು ಹಾಡಿಗಳ ಜನರು ಯಾವುದೇ ಆತಂಕಕ್ಕೆ ಒಳಗಾಗದೇ, ವೈಯಕ್ತಿಕ ಸ್ವಚ್ಛತೆ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ಅರಿವು ಮೂಡಿಸುತ್ತಿದೆ.

ಅಧಿಕಾರಿಗಳಿಂದ ಪರಿಶೀಲನೆ

ನ್ಯೂರೋ‌ ವೈರಸ್(Norovirus case) ಗುಣಲಕ್ಷಣಗಳಾದ ವಾಂತಿ - ಭೇದಿ ಕಂಡುಬಂದಲ್ಲಿ ತಕ್ಷಣವೇ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರೀಕ್ಷಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಗಡಿಭಾಗದ ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸುವಂತೆ ಅಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗೆ ಡಿಎಚ್ಒ ವಿಶ್ವೇಶ್ವರಯ್ಯ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ:ಚುನಾವಣೆಗಾಗಿ ಕೃಷಿ ಕಾನೂನು ರದ್ದು ಮಾಡಿಲ್ಲ, ಸೋಲು ಗೆಲುವಿನ ಪ್ರಶ್ನೆ ಇಲ್ಲವೇ ಇಲ್ಲ: ಬಿಎಸ್​ವೈ ಸ್ಪಷ್ಟನೆ

ABOUT THE AUTHOR

...view details