ಚಾಮರಾಜನಗರ : ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯ 5 ತಂಡಗಳು ಹೈಕೋರ್ಟ್ ಆದೇಶದಂತೆ ಆಕ್ಸಿಜನ್‌ಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡುತ್ತಿವೆ.
ಇದನ್ನೂ ಓದಿ: ಚಾಮರಾಜನಗರ-ಮೈಸೂರು ಡಿಸಿ ಕಚೇರಿಗಳ ದಾಖಲೆ ಜಪ್ತಿಗೆ ಹೈಕೋರ್ಟ್ ಆದೇಶ
ಚಾಮರಾಜನಗರ : ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯ 5 ತಂಡಗಳು ಹೈಕೋರ್ಟ್ ಆದೇಶದಂತೆ ಆಕ್ಸಿಜನ್‌ಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡುತ್ತಿವೆ.
ಇದನ್ನೂ ಓದಿ: ಚಾಮರಾಜನಗರ-ಮೈಸೂರು ಡಿಸಿ ಕಚೇರಿಗಳ ದಾಖಲೆ ಜಪ್ತಿಗೆ ಹೈಕೋರ್ಟ್ ಆದೇಶ
ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ಲಜನಕ ಪೂರೈಕೆ ಮತ್ತು ಅಂದು ಸಿಲಿಂಡರ್ ಲಭ್ಯತೆ ಬಗೆಗಿನ ದಾಖಲೆಗಳನ್ನು ಜಪ್ತಿ ಮಾಡುವಂತೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಡಿಹೆಚ್ಒ ಕಚೇರಿ, ಜಿಲ್ಲಾ ವಿಪತ್ತು ನಿರ್ವಹಣಾ ಕಚೇರಿ, ಡೀನ್ ಕಚೇರಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಪೊಲೀಸರು ದಾಳಿಯಿಟ್ಟು ದಾಖಲೆಗಳನ್ನು ಜಪ್ತಿ ಮಾಡುತ್ತಿದ್ದಾರೆ. ಜೊತೆಗೆ, ಜಪ್ತಿ ಕಾರ್ಯವನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ.
ಚಾಮರಾಜನಗರ ಡಿವೈಎಸ್ಪಿ, ಕೊಳ್ಳೇಗಾಲ ಡಿವೈಎಸ್ಪಿ, ಡಿಸಿಆರ್‌ಬಿ ಡಿವೈಎಸ್ಪಿ ಹಾಗೂ ಮಹಿಳಾ ಠಾಣೆ ಪಿಐ ಮತ್ತು ಇನ್ನೊಂದು ಪೊಲೀಸರ ತಂಡ ಏಕಕಾಲದಲ್ಲಿ ದಾಳಿ ಮಾಡಿ ದಾಖಲೆಗಳನ್ನು ಜಪ್ತಿ ಮಾಡುತ್ತಿದೆ. ಇಂದು ರಾಜ್ಯ ಸರ್ಕಾರ ಆಮ್ಲಜನಕ ದುರಂತವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಿತ್ತು.