ಚಾಮರಾಜನಗರ:ತೀವ್ರ ಕುತೂಹಲ ಕೆರಳಿಸಿದ್ದ ಲೋಕಲ್ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಗಿದಿದ್ದು, ಅಭ್ಯರ್ಥಿಗಳ ಹಣೆಬರಹ ಇವಿಎಂ ಯಂತ್ರಗಳಲ್ಲಿ ಭದ್ರವಾಗಿದೆ.
ಚಾಮರಾಜನಗರ ಲೋಕಲ್ ಎಲೆಕ್ಷನ್: ಯಳಂದೂರಿನಲ್ಲಿ ಗರಿಷ್ಠ-ಗುಂಡ್ಲುಪೇಟೆಯಲ್ಲಿ ಕನಿಷ್ಠ ಮತದಾನ - kannada news
ಚಾಮರಾಜನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದು, ಯಳಂದೂರಿನಲ್ಲಿ ಗರಿಷ್ಠ ಮತದಾನವಾಗಿದೆ ಹಾಗೂ ಗುಂಡ್ಲುಪೇಟೆಯಲ್ಲಿ ಕನಿಷ್ಠ ಮತದಾನವಾಗಿದೆ. ಇನ್ನು ಕೆಲವು ಕಡೆ ಇವಿಎಂ ಯಂತ್ರಗಳು ಕೈಕೊಟ್ಟಿದ್ದು ಬಿಟ್ಟರೆ ಮತದಾನ ಶಾಂತಿಯುತವಾಗಿ ನಡೆದಿದೆ.
ಗುಂಡ್ಲುಪೇಟೆ ಪುರಸಭೆಯ 23 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 76.09ರಷ್ಟು ಮತದಾನವಾಗಿದೆ. ಹನೂರು ಪಟ್ಟಣ ಪಂಚಾಯಿತಿ 13 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 80.12 ಮತದಾನವಾಗಿದ್ದು, ಯಳಂದೂರು ಪಟ್ಟಣ ಪಂಚಾಯಿತಿಯ 11 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಶೇ. 86.31 ರಷ್ಟು ಮತದಾನವಾಗಿದೆ. ಶೇಕಡಾವಾರು ಮತದಾನದಲ್ಲಿ ಯಳಂದೂರು ಹೆಚ್ಚಿದ್ದು, ಗುಂಡ್ಲುಪೇಟೆಯಲ್ಲಿ ಕನಿಷ್ಠ ಮತದಾನವಾಗಿದೆ.
ಗುಂಡ್ಲುಪೇಟೆಯ ಹಲವು ವಾರ್ಡ್ಗಳಲ್ಲಿ 5 ಗಂಟೆಯ ನಂತರವೂ ಮತದಾನ ಮುಂದುವರೆದಿತ್ತು. ಯಳಂದೂರು ಮತ್ತು ಹನೂರಿನ 2 ಬೂತ್ಗಳಲ್ಲಿ ಇವಿಎಂ ಕೈಕೊಟ್ಟಿದ್ದು ಬಿಟ್ಟರೆ ಎಲ್ಲೆಡೆ ಶಾಂತಿಯುತವಾಗಿ ಮತದಾನ ನಡೆದಿದೆ.