ಕರ್ನಾಟಕ

karnataka

ETV Bharat / state

ಹಗಲಿನಲ್ಲಿ ಬಂದ್.. ಸಂಜೆಯಾದರೆ ಸಂತೆ: ಹೀಗಿದೆ ಗಡಿಜಿಲ್ಲೆ ಲಾಕ್​​ಡೌನ್ ಸ್ಥಿತಿ.!

ಇಡೀ ದೇಶವೇ ಲಾಕ್​ಡೌನ್​ ಆಗಿದ್ದು, ಸರ್ಕಾರ ಕೈಗೊಂಡಿರುವ ಮುಂಜಾಗ್ರತಾ ಕ್ರಮಕ್ಕೆ ಜನತೆ ಸಹಕಾರ ನೀಡಬೇಕು. ಆದರೆ ಚಾಮರಾಜನಗರದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಮನ ಬಂದಂತೆ ಓಡಾಡುತ್ತಿರುವ ದೃಶ್ಯಗಳು ಕಂಡು ಬಂದವು.

Chamarajanagar district people are not following lockdown rules
ಚಾಮರಾಜನಗರದಲ್ಲಿ ಜನತೆ ಲಾಕ್​ಡೌನ್​​ ಉಲ್ಲಂಘನೆ ಮಾಡುತ್ತಿರುವುದು

By

Published : Mar 28, 2020, 11:24 AM IST

ಚಾಮರಾಜನಗರ : ಹಗಲು ಹೊತ್ತಿನಲ್ಲಿ ಮೌನಹೊದ್ದು ಮಲಗುವ ಜಿಲ್ಲೆ ಸಂಜೆಯಾಗುತ್ತಿದ್ದಂತೆ ಗಿಜಿಗುಡುವ ಸಂತೆಯಾಗಿ ಮಾರ್ಪಡುತ್ತಿದ್ದು, ಸಾಮಾಜಿಕ ಅಂತರ ವಿಚಾರದಲ್ಲಿ ಜನತೆ ನಿರ್ಲಕ್ಷ್ಯವಹಿಸಿದ್ದಾರೆ.

ಅಗತ್ಯ ವಸ್ತುಗಳ ಅಂಗಡಿಗಳು, ಬೀದಿಬದಿ ತರಕಾರಿ ವ್ಯಾಪಾರ ಸಂಜೆ 5 ಗಂಟೆ ಆಗುತ್ತಿದ್ದಂತೆ ತೆರೆಯುವುದರಿಂದ ಒಂದೇ ಬಾರಿಗೆ ಜನರು ಮುಗಿಬೀಳುತ್ತಿದ್ದಾರೆ. ಇದರಿಂದ ಸಾಮಾಜಿಕ ಅಂತರ ತೋರುವ ಬಾಕ್ಸ್​ಗಳು, ವೃತ್ತಗಳು ಬೈಕ್ ನಿಲ್ಲಿಸುವ ಜಾಗಗಳಾಗಿ ಮಾರ್ಪಡುತ್ತಿವೆ.

ಹಾಪ್ ಕಾಮ್ಸ್, ಮೆಡಿಕಲ್ ಸ್ಟೋರ್​​ಗಳಲ್ಲಿ ಕೊಂಚಮಟ್ಟಿಗೆ ಸಾಮಾಜಿಕ ಅಂತರ ಕಾಪಾಡಿಕೊಂಡರೂ ಅಗತ್ಯ ವಸ್ತುಗಳನ್ನು ಕೊಳ್ಳುವ ಮಾರುಕಟ್ಟೆ, ನಗರಸಭೆ ಮುಂಭಾಗದಲ್ಲಿ ಜನಜಾತ್ರೆಯೇ ನೆರೆಯುತ್ತಿದ್ದು, ಲಾಕ್​​ಡೌನ್ ಮಾಡಿರುವ ಉದ್ದೇಶವೇ ವಿಫಲವಾದಂತಿದೆ.

ಔಷಧ ಸಿಂಪಡನೆ:

ಇನ್ನು ನಗರಸಭೆ ವತಿಯಿಂದ ಜಿಲ್ಲಾಕೇಂದ್ರದ ಎಲ್ಲಾ ರಸ್ತೆಗಳು, ಮಳಿಗೆಗಳ ಮುಂಭಾಗ, ಜನ ಸಂಚಾರ ಹೆಚ್ಚಿರುವ ಸ್ಥಳಗಳಲ್ಲಿ ಔಷಧ ಸಿಂಪಡಿಸಲಾಗಿದೆ.

ABOUT THE AUTHOR

...view details