ಕರ್ನಾಟಕ

karnataka

By ETV Bharat Karnataka Team

Published : Jan 4, 2024, 5:10 PM IST

ETV Bharat / state

ಬಿ.ಕೆ ಹರಿಪ್ರಸಾದ್​ರನ್ನು ಕೂಡಲೇ ಬಂಧಿಸಬೇಕು: ಬಿಜೆಪಿ ಉಪಾಧ್ಯಕ್ಷ ಎನ್​. ಮಹೇಶ್

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾಗುವ ತನಕ ಬಿ ಕೆ ಹರಿಪ್ರಸಾದ್​ ಅವರನ್ನು ಬಂಧನದಲ್ಲಿಡಬೇಕು ಎಂದು ಮಹೇಶ್ ಒತ್ತಾಯಿಸಿದ್ದಾರೆ.

ಬಿಜೆಪಿ ಉಪಾಧ್ಯಕ್ಷ ಮಹೇಶ್
ಬಿಜೆಪಿ ಉಪಾಧ್ಯಕ್ಷ ಮಹೇಶ್

ಬಿ.ಕೆ ಹರಿಪ್ರಸಾದ್ ಅವರನ್ನು ಕೂಡಲೇ ಬಂಧಿಸಬೇಕು: ಬಿಜೆಪಿ ಉಪಾಧ್ಯಕ್ಷ ಎನ್​. ಮಹೇಶ್

ಚಾಮರಾಜನಗರ : ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕೂಡಲೇ ವಿಧಾನ ಪರಿಷತ್​ ಸದಸ್ಯ ಬಿ ಕೆ ಹರಿಪ್ರಸಾದ್ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ಉಪಾಧ್ಯಕ್ಷ ಎನ್‌. ಮಹೇಶ್ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಗೋಧ್ರಾ ಹಿಂಸಾಚಾರ ಮಾದರಿಯ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಬಿ ಕೆ ಹರಿಪ್ರಸಾದ್ ತಿಳಿಸಿದ್ದಾರೆ‌. ನನಗನಿಸುತ್ತಿದೆ, ಇವರೇ ನಡೆಸುವ ಹುನ್ನಾರ ಇದ್ಯಾ? ಎಂದು. ಭಾರತದ 140 ಕೋಟಿ ಜನರಿಗೆ ಗೊತ್ತಿಲ್ಲದಿರುವುದು, ಸೆಂಟ್ರಲ್ ಇಂಟೆಲೆಜೆನ್ಸಿಗೆ ಗೊತ್ತಿಲ್ಲದಿರುವುದು. ಹರಿಪ್ರಸಾದ್ ಗೆ ಕಾಣಿಸಿದೆ ಎಂದರೆ ಇವರೇ ಏನೋ ಹುನ್ನಾರ ಮಾಡುತ್ತಿದ್ದಾರೆ. ದುರ್ಘಟನೆ ನಡೆಸಲು ಪ್ಲಾನ್ ಮಾಡುತ್ತಿರಬಹುದೆಂದು ಶಂಕೆ ವ್ಯಕ್ತಪಡಿಸಿದರು.

ಮುಸ್ಲಿಂರನ್ನು ಆತಂಕಕ್ಕೆ ತಳ್ಳಿ ಇವರು ಮುಸ್ಲಿಂ ಮತ ತೆಗೆದುಕೊಳ್ಳುವುದಾ.? ರಾಮಮಂದಿರ ಉದ್ಘಾಟನೆಯನ್ನು ಇಡೀ ಮುಸ್ಲಿಂ ಸಮುದಾಯ ಸ್ವಾಗತಿಸುತ್ತಿದೆ, ನಿಮಗೇನಾಗಿದೆ? ಏನೋ ಹುನ್ನಾರ ಇದ್ದು, ಹರಿಪ್ರಸಾದ್ ಮೇಲೆ ನಿಗಾ ಇಡಬೇಕು. ಉದ್ಘಾಟನೆ ತನಕ ಇವರನ್ನು ಬಂಧನದಲ್ಲಿಡಬೇಕು ಎಂದು ಮಹೇಶ್ ಆಗ್ರಹಿಸಿದರು.

ಹಿಂದೂ ಕಾರ್ಯಕರ್ತ ಶ್ರೀಕಾಂತ್​ ಪೂಜಾರಿ ಬಂಧನ ಖಂಡಿಸಿ ಪ್ರತಿಭಟನೆ

ರಾಮ ಮಂದಿರ ಉದ್ಘಾಟನೆಗೆ ಇಡೀ ದೇಶ ಕಾತರದಿಂದ ಕಾಯುತ್ತಿದೆ, ಮುಂದಿನ ದಿನಗಳಲ್ಲಿ ಅಯೋಧ್ಯೆ ರಾಮಮಂದಿರ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕೇಂದ್ರ ಆಗಲಿದೆ. ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಕಾಲಜ್ಞಾನಿ ಥರಾ ಮಾತನಾಡುತ್ತಿದ್ದಾರೆ. ರಾಮಮಂದಿರ ಉದ್ಘಾಟನೆ ಗಿಮಿಕ್ ಎಂದಿದ್ದಾರೆ. ಭಾರತದ 140 ಕೋಟಿ ಜನರ ಭಾವನೆಗೆ ಧಕ್ಕೆ ತರುತ್ತಿದ್ದಾರೆ. ನಿಮ್ಮೂರಲ್ಲೇ ರಾಮಮಂದಿರ ಕಟ್ಟಿದರಲ್ಲಾ ಅದು ಗಿಮಿಕ್ಕಾ? ಸಿದ್ದರಾಮಯ್ಯ ರಾಮಭಕ್ತ ಎಂದು ಹೇಳುತ್ತಾರಲ್ಲಾ ಅದು ಗಿಮಿಕ್ಕಾ? ಎಂದು ಮಹೇಶ್​ ಕಿಡಿಕಾರಿದರು.

ಹಿಂದೂ ಕಾರ್ಯಕರ್ತ ಬಂಧನ ಖಂಡಿಸಿ ಪ್ರತಿಭಟನೆ :ಇನ್ನೊಂದೆಡೆಹುಬ್ಬಳ್ಳಿಯಲ್ಲಿ ಹಿಂದೂ ಕಾರ್ಯಕರ್ತ ಶ್ರೀಕಾಂತ್​ ಪೂಜಾರಿ ಬಂಧನ ಖಂಡಿಸಿ ಚಾಮರಾಜನಗರದಲ್ಲಿಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಚಾಮರಾಜೇಶ್ವರ ದೇವಾಲಯ ಮುಂಭಾಗದಲ್ಲಿ ಬಿಜೆಪಿ ಉಪಾಧ್ಯಕ್ಷ ಮಹೇಶ್ ನೇತೃತ್ವದಲ್ಲಿ ಕೆಲಕಾಲ ಧರಣಿ ನಡೆಸಿದ ಪ್ರತಿಭಟನಾಕಾರರು ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ ಶಿವಕುಮಾರ್ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಚಾಮರಾಜೇಶ್ವರ ದೇಗುಲದಿಂದ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಭುವನೇಶ್ವರಿ ವೃತ್ತದ ತನಕ ಪ್ರತಿಭಟನೆ ಮೆರವಣಿಗೆ ನಡೆಸಿದರು. ಅಲ್ಲದೆ, ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಾಷ್ಟ್ರೀಯ ಹೆದ್ದಾರಿ ತಡೆದ ಪ್ರತಿಭಟನಾಕಾರರು ಟೈರ್ ಸುಡಲು ಮುಂದಾದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನಾರರ ಕೈಯಿಂದ ಟೈರ್ ಕಿತ್ತುಕೊಳ್ಳಲು ಪೊಲೀಸರು ಹರಸಹಸಪಟ್ಟರು.

ಇದನ್ನೂ ಓದಿ :ಚಿಕ್ಕಮಗಳೂರು ಪೊಲೀಸ್​ ಠಾಣೆ ಎದುರು ಮಾಜಿ ಸಚಿವ ಸಿ.ಟಿ ರವಿ ಪ್ರತಿಭಟನೆ

ABOUT THE AUTHOR

...view details