ಚಾಮರಾಜನಗರ:ತಾಲೂಕಿನ ಹರವೆ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರಿನಲ್ಲಿ ಕೋವಿಡ್ ಸೋಂಕಿತರೇ ಏಕಪಾತ್ರಾಭಿನಯ, ಅಭಿಪ್ರಾಯಗಳ ಮೂಲಕ ಕೊರೊನಾ ಜಾಗೃತಿ ಮೂಡಿಸಿದ್ದಾರೆ.
ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಒಟ್ಟು 41 ಮಂದಿ ಇದ್ದು, ಸೋಮವಾರವಷ್ಟೇ ಮಿಮಿಕ್ರಿ ಗೋಪಿ ಮತ್ತು ತಂಡ ಹಾಸ್ಯ ಸಂಜೆ ನಡೆಸಿದ್ದರು. ಕಾರ್ಯಕ್ರಮದಿಂದ ಉತ್ತೇಜನಗೊಂಡ ಕೆಲ ಸೋಂಕಿತರು ನಿನ್ನೆ ಏಕಪಾತ್ರಾಭಿನಯದ ಮೂಲಕ ಕೊರೊನಾ ಬಗ್ಗೆ ಭಯ ಬೇಡ, ಪರೀಕ್ಷೆ ಮಾಡಿಸಿಕೊಳ್ಳಿ, ಕೋವಿಡ್ ಕೇರ್ ಸೆಂಟರಿಗೆ ದಾಖಲಾಗಿ ಎಂದು ವಾಟಾಳ್ ನಾಗರಾಜ್, ಹೆಚ್.ಡಿ. ದೇವೇಗೌಡ ಮತ್ತಿತ್ತರ ನಾಯಕರ ಧ್ವನಿಯನ್ನು ಅನುಕರಿಸಿ ಕೊರೊನಾ ಜಾಗೃತಿ ಮಾತುಗಳನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.