ಕರ್ನಾಟಕ

karnataka

ETV Bharat / state

ಕೊರೊನಾ ಉಲ್ಬಣ: ಕೊಳ್ಳೇಗಾಲದ ವರ್ತಕರಿಂದ ಸ್ವಯಂ ಪ್ರೇರಿತ ಲಾಕ್​ಡೌನ್​

ಚಾಮರಾಜನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಕೊಳ್ಳೇಗಾಲದಲ್ಲಿ ವರ್ತಕರು ಸ್ವಯಂ ಪ್ರೇರಿತ ಲಾಕ್​ಡೌನ್​ ಮಾಡಲು ಮುಂದಾಗಿದ್ದಾರೆ.

dfsc
ಕೊಳ್ಳೇಗಾಲದ ವರ್ತಕರಿಂದ ಸ್ವಯಂ ಪ್ರೇರಿತ ಲಾಕ್​ಡೌನ್​

By

Published : Sep 21, 2020, 12:58 PM IST

ಚಾಮರಾಜನಗರ: ಕೊರೊನಾ ಮಹಾಮಾರಿ ಉಲ್ಬಣಿಸುತ್ತಿರುವ ಹಿನ್ನೆಲೆ ಕೊಳ್ಳೇಗಾಲದ ವರ್ತಕರು ಮಧ್ಯಾಹದ ಬಳಿಕ ಅಂಗಡಿ-ಮುಂಗಟ್ಟು ಮುಚ್ಚಿ ಸ್ವಯಂ ಲಾಕ್​ಡೌನ್​ಗೆ ಮುಂದಾಗಿದ್ದಾರೆ.

ಕೊಳ್ಳೇಗಾಲದ ವರ್ತಕರಿಂದ ಸ್ವಯಂ ಪ್ರೇರಿತ ಲಾಕ್​ಡೌನ್​

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,400 ರಕ್ಕೆ ತಲುಪಿದ್ದು, ಕೊಳ್ಳೇಗಾಲ ತಾಲೂಕಿನಲ್ಲೇ 1,000 ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ಇಂದಿನಿಂದ ಅಕ್ಟೋಬರ್​ 4ರವರೆಗೆ ಮಧ್ಯಾಹ್ನ 2.30 ನಂತರ ಅಂಗಡಿಗಳನ್ನು ಮುಚ್ಚಲು ವರ್ತಕರು ತೀರ್ಮಾನಿಸಿದ್ದಾರೆ.

ಕಳೆದ 1 ವಾರದಿಂದಲೂ ಜಿಲ್ಲೆಯಲ್ಲಿ ಸೋಂಕಿನಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಈ ಹಿನ್ನೆಲೆ ಆರೋಗ್ಯದ ಹಿತದೃಷ್ಟಿಯಿಂದ 15 ದಿನ‌ ಸ್ವಯಂ ಲಾಕ್​ಡೌನ್​ಗೆ ಮುಂದಾಗಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ವರ್ತಕರ ಸಂಘ ಮನವಿ ಮಾಡಿದೆ.

ABOUT THE AUTHOR

...view details