ಚಾಮರಾಜನಗರ:ನಾಯಿಗಳ ದಾಳಿಗೊಳಗಾಗಿದ್ದ ಕಡವೆ ಮರಿಯನ್ನು ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿರುವ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ.
ನಾಯಿ ದಾಳಿಯಿಂದ ಒದ್ದಾಡುತ್ತಿದ್ದ ಕಡವೆ ಮರಿ ರಕ್ಷಣೆ..! - Chamarajanagara news
ಮಲೆಮಹದೇಶ್ವರ ಬೆಟ್ಟದಲ್ಲಿ ನಾಯಿಗಳ ದಾಳಿಗೊಳಗಾಗಿದ್ಧ ಕಡವೆ ಮರಿವೊಂದನ್ನು ರಕ್ಷಿಸಲಾಗಿದೆ.
ಕಡವೆಮರಿ ರಕ್ಷಣೆ
ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದಿದ್ದ ಕಡವೆ ಮರಿ ಮೇಲೆ ನಾಯಿಗಳು ಮುಗಿಬಿದ್ದು ದಾಳಿ ಮಾಡುವುದನ್ನು ಕಂಡ ಸ್ಥಳೀಯರು ನಾಯಿಗಳನ್ನು ಓಡಿಸಿ ಗಾಯಗೊಂಡಿದ್ದ ಮರಿಯ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವಿಚಾರ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕಡವೆ ಮರಿಯನ್ನು ಮರಳಿ ಕಾಡಿಗೆ ಬಿಟ್ಟಿದ್ದಾರೆ. ಇನ್ನು, ಜನರ ಪ್ರಾಣಿಪ್ರೀತಿಗೆ ವನ್ಯಜೀವಿ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿ ಸಲಾಂ ಎಂದಿದ್ದಾರೆ.