ಚಾಮರಾಜನಗರ:ವಿದ್ಯಾರ್ಥಿನಿ ಜೊತೆ ನೇತ್ರ ತಜ್ಞರೊಬ್ಬರು ಜಿಲ್ಲಾಸ್ಪತ್ರೆಯಲ್ಲಿ ಅನುಚಿತವಾಗಿ ವರ್ತಿಸಿ, ಎಳೆದಾಡಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.
ಚಾಮರಾಜನಗರ: ವಿದ್ಯಾರ್ಥಿನಿ ಜೊತೆ ನೇತ್ರ ತಜ್ಞನ ಅನುಚಿತ ವರ್ತನೆ ಆರೋಪ - ಚಾಮರಾಜನಗರದಲ್ಲಿ ವಿದ್ಯಾರ್ಥಿನಿ ಜೊತೆ ನೇತ್ರ ತಜ್ಞನ ಅನುಚಿತ ವರ್ತನೆ
ಚಾಮರಾಜನಗರದಲ್ಲಿ ವಿದ್ಯಾರ್ಥಿನಿ ಜೊತೆ ನೇತ್ರ ತಜ್ಞನೊಬ್ಬ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ.
ವಿದ್ಯಾರ್ಥಿನಿ ಜೊತೆ ನೇತ್ರ ತಜ್ಞನ ಅನುಚಿತ ವರ್ತನೆ ಆರೋಪ
ಜಿಲ್ಲಾಸ್ಪತ್ರೆಯ ನೇತ್ರತಜ್ಞ ಡಾ.ಮಹೇಶ್ವರ್ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಈ ಸಂಬಂಧ ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ್ ಅವರಿಗೆ ನೊಂದ ವಿದ್ಯಾರ್ಥಿನಿ ಲಿಖಿತ ದೂರು ನೀಡಿದ್ದಾರೆಂದು ವೈದ್ಯರೊಬ್ಬರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ನರ್ಸಿಂಗ್ ವಿದ್ಯಾರ್ಥಿನಿಯನ್ನು ಕೊಠಡಿಗೆ ಎಳೆದು ಲೈಂಗಿಕವಾಗಿ ಬಳಸಿಕೊಳ್ಳಲು ಅನುಚಿತ ವರ್ತನೆ ತೋರಿದ್ದಾರೆಂದು ಎನ್ನಲಾಗುತ್ತಿದ್ದು, ಆಂತರಿಕ ದೂರು ಸಮಿತಿಯು ವಿಚಾರಣೆ ನಡೆಸಲು ಮುಂದಾಗಿದೆ ಎಂದು ತಿಳಿದುಬಂದಿದೆ.