ಕರ್ನಾಟಕ

karnataka

By

Published : Dec 4, 2021, 6:25 PM IST

ETV Bharat / state

ಜಿಎಸ್​​ಟಿ ಕಟ್ಟದ ಅಂಗಡಿ ಮಾಲೀಕನ ಬಳಿ ಲಂಚಕ್ಕೆ ಬೇಡಿಕೆ: ಇಬ್ಬರು ಭ್ರಷ್ಟ ಅಧಿಕಾರಿಗಳು ಎಸಿಬಿ ಬಲೆಗೆ

ಅಂಗಡಿ ಮಾಲೀಕ ಜಿಎಸ್​ಟಿ ಕಚೇರಿಗೆ ತೆರಳಿದ ವೇಳೆ, ಜಿಎಸ್​ಟಿ ನೋಂದಣಿ ಮಾಡಿಸದಿರುವುದು ಮತ್ತು ಜಿಎಸ್​ಟಿ ಹಣ ಕಟ್ಟದಿರುವ ನೋಟಿಸ್ ಕ್ಲೋಸ್ ಮಾಡಬೇಕು ಎಂದರೆ 10 ಸಾವಿರ ರೂ. ಲಂಚ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಬಳಿಕ 7 ಸಾವಿರ ರೂ. ಪಡೆಯುವಾಗ ಎಸಿಬಿ ದಾಳಿ ನಡೆಸಿ ಆರೋಪಿಗಳ ಬಂಧಿಸಿದ್ದಾರೆ.

commercial-tax-officers-for-taking-bribes
ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು

ಚಾಮರಾಜನಗರ: ಜಿಎಸ್​​ಟಿ ಕಟ್ಟದ ಅಂಗಡಿ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ನಿರೀಕ್ಷಕರು ಎಸಿಬಿ ಬಲೆಗೆ ಬಿದ್ದಿದ್ದಾರೆ. ತೆರಿಗೆ ನಿರೀಕ್ಷಕರಾದ ಅವಿನಾಶ್ ಹಾಗೂ ರವಿಕುಮಾರ್ ಬಂಧಿತ ಅಧಿಕಾರಿಗಳು.

ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಆಟೋಪಾರ್ಟ್ಸ್ ಅಂಗಡಿಗೆ ಈ ಅಧಿಕಾರಿಗಳು ಭೇಟಿ ಕೊಟ್ಟು ಜಿಎಸ್​ಟಿ ಕಟ್ಟದಿರುವ ಬಗ್ಗೆ ತಗಾದೆ ತೆಗೆದು ದಂಡ ಕಟ್ಟುವಂತೆ ನೋಟಿಸ್ ಕೊಟ್ಟಿರುತ್ತಾರೆ.

ನೋಟಿಸ್ ಸಂಬಂಧ ಅಂಗಡಿ ಮಾಲೀಕ ಜಿಎಸ್​ಟಿ ಕಚೇರಿಗೆ ತೆರಳಿದ ವೇಳೆ, ಜಿಎಸ್​ಟಿ ನೋಂದಣಿ ಮಾಡಿಸದಿರುವುದು ಮತ್ತು ಜಿಎಸ್​ಟಿ ಹಣ ಕಟ್ಟದಿರುವ ನೋಟಿಸ್ ಕ್ಲೋಸ್ ಮಾಡಬೇಕು ಎಂದರೆ 10 ಸಾವಿರ ರೂ. ಲಂಚ ಕೊಡಬೇಕೆಂದು ಒತ್ತಾಯಿಸಿದಾಗ ಮಾಲೀಕ ಎಸಿಬಿ ಮೊರೆ ಹೋಗಿದ್ದರು.

ಇಂದು ಜಿಎಸ್​​ಟಿ ಅಧಿಕಾರಿಗಳು 7 ಸಾವಿರ ರೂ‌. ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದು ಸದ್ಯ ಇಬ್ಬರನ್ನೂ ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.

ಇದನ್ನೂ ಓದಿ:ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಇದೆಲ್ಲ ಕೊರೊನಾ ಮುಕ್ತಿಗಾಗಿ ಎಂದ ಕಿಲ್ಲರ್‌ ವೈದ್ಯ..!

ABOUT THE AUTHOR

...view details