ಕರ್ನಾಟಕ

karnataka

ETV Bharat / state

ಮಹದೇಶ್ವರನ ಹುಂಡಿಯಲ್ಲಿ 96 ಲಕ್ಷ ರೂ. ಸಂಗ್ರಹ: ಅಮೆರಿಕನ್ ಡಾಲರ್ ಕೂಡ ಅರ್ಪಣೆ..! - ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ

ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ನಡೆದಿದ್ದು, 96 ಲಕ್ಷ ರೂ. ಸಂಗ್ರಹವಾಗಿದೆ ಎಂದು ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.

male mahadeshwara temple
ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ

By

Published : Jun 26, 2020, 11:12 PM IST

ಚಾಮರಾಜನಗರ:ಬರೋಬ್ಬರಿ 4 ತಿಂಗಳ ಬಳಿಕ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ನಡೆದಿದ್ದು, 96 ಲಕ್ಷ ರೂ. ಸಂಗ್ರಹವಾಗಿದೆ.

ಯುಗಾದಿ ಜಾತ್ರೆ ಬಳಿಕ ಹುಂಡಿ ಹಣ ಏಣಿಕೆಯಾಗಬೇಕಿತ್ತು. ಆದರೆ, ಕೊರೊನಾ ಲಾಕ್​ಡೌನ್​ನಿಂದ ಜಾತ್ರೆ ರದ್ದಾಗಿ ದೇಗುಲವೇ ಬಂದ್​ ಆಗಿದ್ದರಿಂದ ಹಣ ಎಣಿಕೆ ನಡೆದಿರಲಿಲ್ಲ.‌ ಈಗ ಸಂಗ್ರಹವಾಗಿರುವ 96, 27, 988 ರೂ.ನಲ್ಲಿ ಶೇ. 90 ರಷ್ಟು ಹಣ ಮಾರ್ಚ್​ನಲ್ಲಿ ಬಂದ ಭಕ್ತಾದಿಗಳದ್ದಾಗಿದೆ ಎಂದು ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ

ಹುಂಡಿ ಹಣದ ಜೊತೆಗೆ 19.3 ಗ್ರಾಂ ಚಿನ್ನ, 1.9 ಕೆಜಿ ಬೆಳ್ಳಿಯನ್ನು ಕಾಣಿಕೆ ರೂಪದಲ್ಲಿ ಭಕ್ತರು ಅರ್ಪಿಸಿದ್ದಾರೆ. ಇದರ ಜೊತೆಗೆ, ವಿಶೇಷವಾಗಿ 5 ಅಮೇರಿಕನ್ ಡಾಲರ್​ ಅನ್ನೂ ಮಾದಪ್ಪನ ಹುಂಡಿಗೆ ಭಕ್ತರೊಬ್ಬರು ಅರ್ಪಿಸಿದ್ದಾರೆ. ದೇಗುಲ ಬಂದ್​ ಆಗಿದ್ದರಿಂದ ಮಹದೇಶ್ವರನ ಆದಾಯದಲ್ಲಿ ಕೋಟ್ಯಂತರ ರೂ. ಖೋತವಾಗಿದ್ದು ಲಾಡು ಪ್ರಸಾದದ ಬೇಡಿಕೆಯೂ ಕುಸಿದಿತ್ತು‌. ಈಗೀಗ ಭಕ್ತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.

ABOUT THE AUTHOR

...view details