ಚಾಮರಾಜನಗರ :ಪಾರ್ಕಿಂಗ್ ಲೈಟ್ ಹಾಕಿಕೊಂಡು ನಿಂತಿದ್ದ ಲಾರಿಯಲ್ಲಿ ದಾಖಲಾತಿಯಿಲ್ಲದ 9 ಲಕ್ಷ ರೂ. ಪತ್ತೆಯಾಗಿರುವ ಘಟನೆ ಗುಂಡ್ಲುಪೇಟೆ ಹೊರವಲಯದ ಸುರಭಿ ಹೋಟೆಲ್ ಸಮೀಪ ಶುಕ್ರವಾರ ಮುಂಜಾನೆ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆ ಠಾಣೆಯ ಕಾನ್ಸ್‌ಟೇಬಲ್ ಪವನ್ ಎಂಬುವರು ರಾತ್ರಿ ಗಸ್ತಿನಲ್ಲಿದ್ದ ವೇಳೆ ಲಾರಿಯ ಬಾಗಿಲುಗಳು ತೆರೆದು ಪಾರ್ಕಿಂಗ್ ಲೈಟ್ ಆನ್ ಆಗಿರುವುದನ್ನು ಗಮನಿಸಿದ್ದಾರೆ. ಎಷ್ಟೇ ಕೂಗಿ, ತಡಕಾಡಿದರೂ ಯಾರೂ ಇಲ್ಲದ್ದನ್ನು ಗಮನಿಸಿ ಲಾರಿ ಪರಿಶೀಲಿಸಿದಾಗ ಕವರಿನಲ್ಲಿ 9 ಲಕ್ಷ ರೂ. ಹಣ ಸಿಕ್ಕಿದೆ.