ಚಾಮರಾಜನಗರ: ಶಿವರಾತ್ರಿ ಎಂದರೆ ಜಾಗರಣೆ, ಬಿಲ್ವಾರ್ಚಣೆ, ಅಭಿಷೇಕ ಸಾಮಾನ್ಯ. ಆದರೆ ಜಿಲ್ಲೆಯ ಈ ಗ್ರಾಮದ ಸಂಪ್ರದಾಯ ಸ್ವಲ್ಪ ಕಷ್ಟವೇ.
ಹೌದು..,ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮಸ್ಥರು ಬರೋಬ್ಬರಿ 35 ಕಿ.ಮೀ ದೂರದ ನದಿಗೆ ಬರಿಗಾಲಲ್ಲಿ ತೆರಳಿ ಗಂಗೆ ಹೊತ್ತು ತಂದು ಲಿಂಗಾಭೀಷೇಕ ನಡೆಸುತ್ತಾರೆ. ಅದೇ ಗಂಗೆ ಗ್ರಾಮದ ಪ್ರತಿ ಮನೆಗೂ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ.
ಗ್ರಾಮದ ಸಿದ್ದರಾಮೇಶ್ವರನಿಗೆ ಕಪಿಲಾ ಜಲದಿಂದಅಭಿಷೇಕ ಮಾಡುವ ವಿಶಿಷ್ಟ ಸಂಪ್ರದಾಯ ಹಲವು ತಲೆಮಾರುಗಳಿಂದ ಗ್ರಾಮದ 6 ವಂಶಸ್ಥರಲ್ಲಿ ನಡೆದುಕೊಂಡು ಬರುತ್ತಿದೆ. ಗ್ರಾಮದ 6ಕುಟುಂಬಗಳಿಂದ ನಾಗಣ್ಣ, ಶಾಂತಮಲ್ಲಪ್ಪ, ಶಿವಮಲ್ಲಪ್ಪ, ಕುಮಾರ್, ರಾಜು, ಮಾದಪ್ಪ ಎಂಬವರು ಸುಮಾರು 35 ಕಿ.ಮೀ. ದೂರದ ನಂಜನಗೂಡು ತಾಲೂಕಿನ ತಗಡೂರು ಬಳಿಯ ಆನಂಬಳ್ಳಿ ಗ್ರಾಮದ ಕಪಿಲಾ ನದಿ ದಡಕ್ಕೆ ತೆರಳಿ ಕಪಿಲೆಗೆ ಪೂಜೆ ಸಲ್ಲಿಸಿ,ಬಿಂದಿಗೆಗೆ ಕಪಿಲಾ ಜಲವನ್ನು ತುಂಬಿಸಿಕೊಂಡು ಕಾಲ್ನಡಿಗೆಮೂಲಕ ಗ್ರಾಮ ಸೇರುತ್ತಾರೆ.
ಲಿಂಗಾಭಿಷೇಕಕ್ಕೆ ಗಂಗೆ ತರಲು 35 ಕಿ.ಮೀ ಬರಿಗಾಲಲ್ಲಿ ನಡೆದ ಭಕ್ತರು - ಗಂಗೆ
ಈ ಗ್ರಾಮದ ಜನರು ಶಿವರಾತ್ರಿಯ ದಿನ 35 ಕಿ.ಮೀ ದೂರದ ನದಿಗೆ ಬರಿಗಾಲಲ್ಲಿ ತೆರಳಿ ಗಂಗೆ ಹೊತ್ತು ತಂದು ಲಿಂಗಾಭೀಷೇಕ ಮಾಡುವ ಸಂಪ್ರದಾಯವನ್ನು ತಲೆಮಾರುಗಳಿಂದ ನಡೆಸಿಕೊಂಡು ಬಂದಿದ್ದಾರೆ.
ಬರಿಗಾಲಲ್ಲಿ ಗಂಗೆ ಹೊತ್ತು ತರುತ್ತಿರುವ ಭಕ್ತರು
4 ಬಿಂದಿಗೆಗಳ ನೀರಲ್ಲಿಸಿದ್ಧರಾಮೇಶ್ವರನ ಅಭಿಷೇಕಕ್ಕೆ 1ಬಿಂದಿಗೆ ನೀರು, ಇನ್ನಿತರ ದೇವರ ಅಭಿಷೇಕಕ್ಕೆ 2 ಬಿಂದಿಗೆ ನೀರು ಹಾಗೂ ಉಳಿದ 1ಬಿಂದಿಗೆ ನೀರು ಗ್ರಾಮದ ಮನೆಗಳಿಗೆ ತೀರ್ಥ ರೂಪದಲ್ಲಿ ಹಂಚಿಕೆಯಾಗುತ್ತದೆ.