ಚಾಮರಾಜನಗರ: ನಿಗೂಢವಾಗಿ 3 ಜಾನುವಾರು ಮೃತಪಟ್ಟಿರುವ ಧಾರುಣ ಘಟನೆ ಜಿಲ್ಲೆಯ ಹನೂರು ತಾಲೂಕಿನ ಕೌದಳ್ಳಿ ಗ್ರಾಮದಲ್ಲಿ ನಡೆದಿದೆ.
ಕೌದಳ್ಳಿ ಗ್ರಾಮದ ಗೋವಿಂದ್ ಎಂಬುವವರಿಗೆ ಸೇರಿದ್ದ 2 ಎತ್ತು ಹಾಗೂ 1 ಹಸು ಮೇಯಲು ತೆರಳಿದ್ದ ವೇಳೆ ಜಮೀನೊಂದರಲ್ಲಿ ಸಾವಿಗೀಡಾಗಿವೆ. ಬಾಯಲ್ಲಿ ನೊರೆ ಮತ್ತು ವಾಸನೆ ಗಮನಿಸಿದಾಗ ಮಾಲೀಕ ಗೋವಿಂದ, ಯೂರಿಯಾ ಮಿಶ್ರಿತ ನೀರು ಕುಡಿಸಿ ಕಿಡಿಗೇಡಿಗಳು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.