ಚಾಮರಾಜನಗರ:ಚುನಾವಣೆಯಲ್ಲಿ ಶತಾಯುಷಿ ಅಜ್ಜಿ ಮತದಾನ ಮಾಡುವ ಮೂಲಕ ಗಮನ ಸೆಳೆದಿರುವ ಘಟನೆ ತಾಲೂಕಿನ ಕುಲಗಾಣ ಗ್ರಾ.ಪಂ. ವ್ಯಾಪ್ತಿಯ ಹಿರೇಬೇಗೂರು ಗ್ರಾಮದಲ್ಲಿ ನಡೆದಿದೆ.
ಮತದಾನಕ್ಕೆ ಯುವ ಸಮುದಾಯಕ್ಕಿಂತ ವೃದ್ಧರ ಪಾಲ್ಗೊಳ್ಳಿವಿಕೆಯೇ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬಂದಿದೆ. ಮಾದಮ್ಮ ಎಂಬ 101 ವರ್ಷದ ವೃದ್ಧೆ ಶಿಕ್ಷಕರಾದ ಮಧು ಹಾಗೂ ರವಿ ಎಂಬುವರ ಸಹಾಯದಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡುವ ಮೂಲಕ ಪ್ರಜಾತಂತ್ರದ ಉತ್ಸವದ ಮಹತ್ವ ಸಾರಿದ್ದಾರೆ.
ಮತದಾನಕ್ಕೆ ವೃದ್ಧರ ಪಾಲ್ಗೊಳ್ಳಿವಿಕೆಯೇ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬಂದಿದೆ. ಓದಿ:ಮಡಿಕೆ ಬದಲು ಸಿಲಿಂಡರ್ : ಚಿಹ್ನೆ ಮುದ್ರಣ ದೋಷದಿಂದ ಮತಗಟ್ಟೆಯಲ್ಲಿ ವೋಟಿಂಗ್ ಸ್ಥಗಿತ
ಮತದಾನಕ್ಕೆ ಯುವ ಸಮುದಾಯಕ್ಕಿಂತ ವೃದ್ಧರ ಪಾಲ್ಗೊಳ್ಳಿವಿಕೆಯೇ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬಂದಿದೆ. ಬೆಳಗಿನ ಚಳಿ ಲೆಕ್ಕಿಸದೇ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸಂಭ್ರಮದಿಂದ ಮತದಾನದಲ್ಲಿ ಪಾಲ್ಗೊಂಡು ಯುವ ಸಮುದಾಯದವರನ್ನೇ ನಾಚಿಸುವಂತೆ ಮಾಡಿದ್ದು ವಿಶೇಷ. ಊರುಗೋಲು, ವ್ಹೀಲ್ಚೇರ್ಗಳ ಮೂಲಕ ಆಗಮಿಸಿ ಮತದಾನದ ಮಹತ್ವ ಸಾರಿದ್ದಾರೆ.